-->

ಆಕಾಶ್ ನಿಂದ (AESL) ನ ANTHE 2024 ಪರೀಕ್ಷೆ ಘೋಷಣೆ

ಆಕಾಶ್ ನಿಂದ (AESL) ನ ANTHE 2024 ಪರೀಕ್ಷೆ ಘೋಷಣೆ

 

 


ಮಂಗಳೂರು : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ (ANTHE) ಆರಂಭಿಸಿ 15 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇತ್ತೀಚಿನ ಆವೃತ್ತಿಯಾದ ANTHE -2024 ಅನ್ನು ಪ್ರಕಟಿಸಿದೆ.

ಮಂಗಳೂರಿನಲ್ಲಿ ಮಾತನಾಡಿದ ಆಕಾಶ್ ಸಹಾಯಕ ನಿರ್ದೇಶಕ ಶ್ಯಾಮ ಪ್ರಸಾದ ಅವರು 7 ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಶೇ.100 ರವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶವನ್ನು ಗಳಿಸಬಹುದಾಗಿದೆ.   ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಯುಎಸ್ಎದ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್ ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಕಾರ್ಯಕ್ರಮವೂ ಇರಲಿದೆ ಎಂದರು.

 

ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ಸಿಇಒ, ಎಂಡಿ ದೀಪಕ್ ಮೆಹ್ರೋತ್ರಾ ಮಾತನಾಡಿ, ದೇಶದ ವಿದ್ಯಾರ್ಥಿಗಳ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ANTHE  ಕಳೆದ 15 ವರ್ಷಗಳಿಂದಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದೆ ಎಂದರು.

 

ANTHE 2024 . 19 ರಿಂದ 27 ಅವಧಿಯಲ್ಲಿ ನಡೆಯಲಿದ್ದು, ಆನ್ ಲೈನ್ ಮತ್ತು ಆಫ್ ಲೈನ್ ಗಳೆರಡರಲ್ಲೂ ನಡೆಯಲಿದೆ. ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗುತ್ತಿದೆ ಎಂದರು.

 

ಆಕಾಶ್ ಗೆ ದಾಖಲಾಗಿ ಅತ್ಯುನ್ನತ ಸಾಧನೆ ಮಾಡಿದ ಮತ್ತು ಉನ್ನತ ಶ್ರೇಣಿ ಪಡೆದುಕೊಳ್ಳುವಲ್ಲಿ ಅನೇಕ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ .ರಿಷಿ ಶೇಖರ್ ಶುಕ್ಲಾ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 25), ಕೃಷ್ಣ ಸಾಯಿ ಶಿಶಿರ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 67), ಅಭಿಷೇಕ್ ಜೈನ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 78). ಇವರಲ್ಲದೇ, ಎನ್ಇಇಟಿ 2023 ರಲ್ಲಿ ಸಂಸ್ಥೆಯ ಟಾಪ್ ಸ್ಕೋರರ್ ಗಳಾಗಿ ಕೌಸ್ತವ್ ಬೌರಿ (ಎಐಆರ್ 03), ಧೃವ್ ಅಡ್ವಾಣಿ(ಎಐಆರ್ 05), ಸೂರ್ಯ ಸಿದ್ಧಾರ್ಥ್ ಎನ್ (ಎಐಆರ್ 06), ಆದಿತ್ಯಾ ನೀರಜೆ (ಎಐಆರ್ 07) ಮತ್ತು ಆಕಾಶ್ ಗುಪ್ತಾ(ಎಐಆರ್ 28) ಹೊರಹೊಮ್ಮಿದ್ದಾರೆ ಎಂದರು.

 

ಆಫ್ ಲೈನ್ ಮತ್ತು ಆನ್ ಲೈನ್ ಪರೀಕ್ಷೆಗಳೆರಡಕ್ಕೂ 200 ರೂಪಾಯಿ ಶುಲ್ಕವಿದೆ. 15 ಆಗಸ್ಟ್ 2024 ರೊಳಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯ್ತಿ ಸಿಗಲಿದೆ. ಆನ್ ಲೈನ್ ಪರೀಕ್ಷೆಗಿಂತ ಮೂರು ದಿನಗಳ ಮೊದಲು ಮತ್ತು ಆಫ್ ಲೈನ್ ಪರೀಕ್ಷೆ ಆರಂಭಗೊಳ್ಳುವ ಏಳು ದಿನಗಳೊಳಗೆ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು.

 

ANTHE ಆಫ್ ಲೈನ್ ಪರೀಕ್ಷೆಗಳು . 20 ಮತ್ತು 27, 2024 ರಂದು ದೇಶಾದ್ಯಂತ ಇರುವ ಆಕಾಶ್ ಸಂಸ್ಥೆಯ 315+ ಕೇಂದ್ರಗಳಲ್ಲಿ ನಡೆಯಲಿವೆ. ಆನ್ ಲೈನ್ ಪರೀಕ್ಷೆಗಳನ್ನು . 19 ರಿಂದ 27, 2024 ರವರೆಗೆ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ ಎಂದರು.

 

10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ  08, 2024 ರಂದು ಪ್ರಕಟಿಸಲಾಗುತ್ತದೆ. ಇದೇ ವೇಳೆ, 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ 13, 2024 ಮತ್ತು 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ . 16, 2024 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಏರಿಯಾ ಸೇಲ್ಸ್ ಹೆಡ್ ಸೋಮೇಶ್ವರ,  ಬ್ರಾಂಚ್ ಹೆಡ್  ವಿಶ್ವನಾಥ ಉಪಸ್ಥಿತರಿದ್ದರು.

 

 

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99