ಮೈದುಂಬಿ ಹರಿದ ಕೆಆರ್‌ಎಸ್: ಬಾಗಿನ ಅರ್ಪಣೆಗೆ ಡಿಸಿಎಂ ಡಿಕೆಶಿಗೆ ಆಹ್ವಾನ
Saturday, July 27, 2024
ಮೈದುಂಬಿ ಹರಿದ ಕೆಆರ್‌ಎಸ್: ಬಾಗಿನ ಅರ್ಪಣೆಗೆ ಡಿಸಿಎಂ ಡಿಕೆಶಿಗೆ ಆಹ್ವಾನ
ಕರ್ನಾಟಕ ರಾಜ್ಯದ ಜೀವನಾಡಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು, ಕೃಷ್ಣರಾಜ ಸಾಗರ ಅಣೆಕಟ್ಟು(ಕೆ.ಆರ್.ಎಸ್. ಡ್ಯಾಮ್) ಭರ್ತಿಯಾಗಿದೆ.
ಈ ಹಿನ್ನೆಲೆಯಲ್ಲಿ, 29.07.2024 ಸೋಮವಾರದಂದು ಕಾವೇರಿ ನದಿಗೆ ಕೆ.ಆರ್. ಎಸ್ ಅಣೆಕಟ್ಟಿನಲ್ಲಿ ಭಾಗಿನ ಅರ್ಪಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ.
ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಶಾಸಕರಾದ ನರೇಂದ್ರಸ್ವಾಮಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸೌಧದಲ್ಲಿ ಅಧಿಕೃತ ಆಹ್ವಾನ ನೀಡಿದರು.