ಟೋಲ್ ದರ ದುಬಾರಿ: ವಾಹನ ಮಾಲೀಕರ ಜೇಬಿಗೆ ಮತ್ತೆ ಕತ್ತರಿ
Monday, June 3, 2024
ಟೋಲ್ ದರ ದುಬಾರಿ: ವಾಹನ ಮಾಲೀಕರ ಜೇಬಿಗೆ ಮತ್ತೆ ಕತ್ತರಿ
ತಕ್ಷಣದಿಂದಲೇ ಜಾರಿಗೆ ಬರುವಂತೆ ಟೋಲ್ ದರಗಳನ್ನು ಪರಿಷ್ಕರಿಸಲಾಗಿದೆ. ಶೇ. 5ರಷ್ಟು ಏರಿಕೆ ಮಾಡಲಾಗಿದ್ದು, ವಾಹನ ಮಾಲೀಕರ ಜೇಬಿಗೆ ಮತ್ತೆ ಕತ್ತರಿ ಹಾಕಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿಗಳ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದ್ದು, ಈ ನೂತನ ದರಗಳು ಜೂನ್ 3ರಿಂದಲೇ ಜಾರಿಗೆ ಬರಲಿದೆ.
ದೇಶದ ಎಲ್ಲ ಹೆದ್ದಾರಿಗಳಿಗೂ ಇದು ಅನ್ವಯವಾಗಲಿದೆ. ಪ್ರತಿ ವರ್ಷ ಏಪ್ರಿಲ್ 1ರಂದು ಪರಿಷ್ಕೃತ ದರಗಳು ಜಾರಿಗೆ ಬರುತ್ತಿತ್ತು. ಈ ಬಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಇದ್ದ ಕಾರಣ ಶುಲ್ಕ ಏರಿಕೆಯನ್ನು ಮುಂದೂಡಲಾಗಿತ್ತು.
ದೇಶದಲ್ಲಿ ಒಟ್ಟು 855 ಟೋಲ್ ಪ್ಲಾಜಾಗಳಿವೆ. ಪ್ರತಿ ವರ್ಷ ಸಗಟು ಹಣದುಬ್ಬರದ ಆಧಾರದ ಮೇಲೆ ಈ ದರಗಳನ್ನು ಪರಿಷ್ಕರಿಸಲಾಗುತ್ತಿದೆ.