ದಕ್ಷಿಣ ಕನ್ನಡ ಜಿಲ್ಲೆಗೆ ಬುಧವಾರ ಸಾರ್ವತ್ರಿಕ ರಜೆ: ಜಿಲ್ಲಾಧಿಕಾರಿ ಘೋಷಣೆ
Wednesday, April 10, 2024
ದಕ್ಷಿಣ ಕನ್ನಡ ಜಿಲ್ಲೆಗೆ ಬುಧವಾರ ಸಾರ್ವತ್ರಿಕ ರಜೆ: ಜಿಲ್ಲಾಧಿಕಾರಿ ಘೋಷಣೆ
ಬುಧವಾರ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬುಧವಾರ ಸಾರ್ವತ್ರಿಕ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಳೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಆದರೆ, ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌ಗಳಿಗೆ ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್ ಅನ್ವಯವಾಗುವುದರಿಂದ ಜಿಲ್ಲಾಧಿಕಾರಿ ಆದೇಶದಿಂದ ಹೊರತಾಗಿರುತ್ತದೆ.
ಅದೇ ರೀತಿ, ಈಗಾಗಲೇ ನಿಗದಿಯಾಗಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉಳಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಬುಧವಾರ ರಜೆ ಘೋಷಣೆಯಾಗಲಿದ್ದು, ಅದರ ಬದಲಿಗೆ ಗುರುವಾರ ಕರ್ತವ್ಯದ ದಿನವಾಗಿ ಪರಿಗಣನೆಯಾಗಲಿದೆ.