ಯತ್ನಾಳ್ ಕೀಳು ಅಭಿರುಚಿಯ ಹೇಳಿಕೆ: ಬಿಜೆಪಿ ನಾಯಕನಿಗೆ ಎದುರಾಯಿತು ಸಂಕಷ್ಟ; ಹಿರಿಯ ನಾಯಕನ ವಿರುದ್ಧ ಎಫ್‌ಐಆರ್
Tuesday, April 9, 2024
ಯತ್ನಾಳ್ ಕೀಳು ಅಭಿರುಚಿಯ ಹೇಳಿಕೆ: ಬಿಜೆಪಿ ನಾಯಕನಿಗೆ ಎದುರಾಯಿತು ಸಂಕಷ್ಟ; ಹಿರಿಯ ನಾಯಕನ ವಿರುದ್ಧ ಎಫ್‌ಐಆರ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಟುಂಬದ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸಂಕಟ ಎದುರಾಗಿದೆ.
ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಯತ್ನಾಳ್ ಹೇಳಿಕೆ ಬಗ್ಗೆ ದೂರು ನೀಡಿದ್ದು, ದ್ವೇಷ ಭಾವನೆ ಹೆಚ್ಚಿಸುವ ಆರೋಪದ ಅಡಿ ಐಪಿಸಿ ಸೆಕ್ಷನ್ 153b ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯತ್ನಾಳ್ ಅವರ ಹೇಳಿಕೆಯಿಂದ ಮನಸ್ಸಿಗೆ ನೋವು ಆಗಿದೆ. ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬವನ್ನು ಅವಹೇಳನ ಮಾಡಿ ನಿಂದಿಸಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಟಬೂ ರಾವ್ ದೂರು ನೀಡಿದ್ದಾರೆ.
ಮಾತೆ ಎಂದು ಗೌರವಿಸುವ ಹಿಂದೂ ಸಮಾಜ, ಯತ್ನಾಳ್ ಹೇಳಿಕೆಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಟಬೂ ರಾವ್ ಹೇಳಿದ್ದಾರೆ.