ಗ್ಯಾಸ್ ಸಿಲಿಂಡರ್ ವಿತರಿಸಲು ಲೈಸೆನ್ಸ್‌ಗೆ ಲಂಚದ ಬೇಡಿಕೆ: 50 ಸಾವಿರ ಲಂಚ ಪಡೆದ ಎಸಿಪಿ ಚಾಲಕ, ಹೆಡ್‌ಕಾನ್ಸ್‌ಟೆಬಲ್ ಬಂಧನ
ಗ್ಯಾಸ್ ಸಿಲಿಂಡರ್ ವಿತರಿಸಲು ಲೈಸೆನ್ಸ್‌ಗೆ ಲಂಚದ ಬೇಡಿಕೆ: 50 ಸಾವಿರ ಲಂಚ ಪಡೆದ ಎಸಿಪಿ ಚಾಲಕ, ಹೆಡ್‌ಕಾನ್ಸ್‌ಟೆಬಲ್ ಬಂಧನ
ಗ್ಯಾಸ್ ಸಿಲಿಂಡರ್ ವಿತರಿಸಲು ಲೈಸೆನ್ಸ್ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಮತ್ತು 50 ಸಾವಿರ ಲಂಚ ಪಡೆದ ಆರೋಪದಲ್ಲಿ ಎಸಿಪಿ ಚಾಲಕ, ಹೆಡ್‌ಕಾನ್ಸ್‌ಟೆಬಲ್ ಇಬ್ಬರನ್ನು ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪೀಣ್ಯ ಎಸಿಪಿ ಜೀಪ್ ಡ್ರೈವರ್ ನಾಗರಾಜ್ ಮತ್ತು ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಗಂಗ ಹನುಮಯ್ಯ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳಲು 50 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
ಚೇತನ್ ಎಂಬಾತ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಆರ್‌ಎಂಸಿ ಯಾರ್ಡ್‌ನಲ್ಲಿ ಇರುವ ಎಸಿಪಿ ಕಚೇರಿಯಲ್ಲಿ ಮುಂಗಡವಾಗಿ 50 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.