ಚಂಡೀಗಢ ಚುನಾವಣೆ ಫಿಕ್ಸಿಂಗ್: ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ ಪಕ್ಷಪಾತಿ ಚುನಾವಣಾಧಿಕಾರಿ
ಚಂಡೀಗಢ ಚುನಾವಣೆ ಫಿಕ್ಸಿಂಗ್: ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ ಪಕ್ಷಪಾತಿ ಚುನಾವಣಾಧಿಕಾರಿ
ಚಂಡೀಗಢ ಚುನಾವಣೆಯಲ್ಲಿ ಸಿಸಿ ಕ್ಯಾಮರಾದ ಮುಂದೆಯೇ ಫಿಕ್ಸಿಂಗ್ ನಡೆಸಿದ ಬಿಜೆಪಿ ಅಭ್ಯರ್ಥಿ ಗೆಲುವನ್ನು ಖಾತ್ರಿ ಪಡಿಸಿದ ಪಕ್ಷಪಾತಿ ಚುನಾವಣಾಧಿಕಾರಿ ಅನಿಲ್ ಮಸೀಹ್ ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ್ದಾರೆ.
ಚಂಡೀಗಢ ಮೇಯರ್ ಫಲಿತಾಂಶದಲ್ಲಿ ಬಿಜೆಪಿಯೇತರ ಮತಗಳನ್ನು ಅಸಿಂಧುಗೊಳಿಸಿದ್ದ ಮಸೀಹ್ ಬಿಜೆಪಿ ಗೆಲುವನ್ನು ಮೋಸದಿಂದ ಖಾತ್ರಿಪಡಿಸಿದ್ದರು.
ಇದೀಗ ಮತ ಎಣಿಕೆ ಸಮಯದಲ್ಲಿ ಪಕ್ಷಪಾತಿ ದುರ್ವರ್ತನೆ ತೋರಿದ್ದಕ್ಕಾಗಿ ಮೆಹ್ಸೀನ್ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಜಾಪ್ರಭುತ್ವಕ್ಕೆ ಅಪಚಾರ ನಡೆಸಿದ ಡೆಮಾಕ್ರಸಿಯನ್ನು ಕಗ್ಗೊಲೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು.
ಇದೀಗ ಸ್ವತಃ ಅಕ್ರಮ ಎಸಗಿದ ಚುನಾವಣಾಧಿಕಾರಿಯೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪ ನಿರಾಕರಿಸಿ ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್‌ನ್ನು ಹಿಂದಕ್ಕೆ ಪಡೆಯುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ನಾನು ಆತಂಕದಲ್ಲಿದ್ದೇನೆ. ಖಿನ್ನತೆ ಎದುರಿಸುತ್ತಿದ್ದೇನೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಮೆಹ್ಸೀನ್ ಚುನಾವಣಾಧಿಕಾರಿಯಾಗಿದ್ದ ಚುನಾವಣೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಪರಾಜಿತರಾಗಿದ್ದ ಆಮ್ ಆದ್ಮಿ- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ನೂತನ ಮೇಯರ್ ಆಗಿ ಘೋಷಣೆ ಮಾಡಲಾಗಿತ್ತು.
ಕುಮಾರ್ ಪರ ವಾದಿಸಿದ ಅಭಿಷೇಕ್ ಮನು ಸಿಂಘ್ವಿ, ಈ ಕ್ಷಮಾಪಣೆಯನ್ನು ವಿರೋಧಿಸಿದರು.