ಸಿಎಂ ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ: ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಕನ್ನಡಕ್ಕೆ ಸಂಕಷ್ಟ, ಎಫ್‌ಐಆರ್ ದಾಖಲು
ಸಿಎಂ ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ: ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಕನ್ನಡಕ್ಕೆ ಸಂಕಷ್ಟ, ಎಫ್‌ಐಆರ್ ದಾಖಲು
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಕನ್ನಡ ಚಾನೆಲ್ ಸಂಪಾದಕ ನಿರಂಜನ್ ಅವರಿಗೆ ಸಂಕಷ್ಟ ಎದುರಾಗಿದೆ.
ಈ ಇಬ್ಬರು ಪತ್ರಕರ್ತರು ಮತ್ತು ಅವರ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕ ರವೀಂದ್ರ ಅವರು ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ.
ಸಿದ್ದರಾಮಯ್ಯ ಅವರಿಂದಾಗಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇದರಿಂದ ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್ ನಡುದಾರಿಯಲ್ಲಿ ನಿಲ್ಲುವಂತಾಯಿತು ಎಂಬ ಹಸಿ ಹಸಿ ಸುಳ್ಳನ್ನು ಈ ಪತ್ರಕರ್ತರಿಬ್ಬರು ತಮ್ಮ ಚಾನೆಲ್ ಮೂಲಕ ಬಿತ್ತರಿಸಿದ್ದರು.
ಅಸಲಿಗೆ, ಅಂತಹ ಘಟನೆಯೇ ನಡೆದಿರಲಿಲ್ಲ ಮತ್ತು ಆ ದಿನ ಅವರು ಬೆಂಗಳೂರಿನಲ್ಲೇ ಇರಲಿಲ್ಲ. ಅವರು ಮೈಸೂರಿನಲ್ಲಿ ಇದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ತಪ್ಪುದಾರಿಗೆ ಎಳೆಯಲು ರಿಪಬ್ಲಿಕ್ ಇಂತಹ ಸುಳ್ಳು ವರದಿ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.