"ನನಗೆ ಪ್ರೀತಿಸುವ ಹಕ್ಕಿಲ್ಲವೇ..?": ಚೈತ್ರಾ ಹೆಬ್ಬಾರ್ ಪ್ರಶ್ನೆಗೆ ತಬ್ಬಿಬ್ಬಾದ ಪೊಲೀಸರು!
"ನನಗೆ ಪ್ರೀತಿಸುವ ಹಕ್ಕಿಲ್ಲವೇ..?": ಚೈತ್ರಾ ಹೆಬ್ಬಾರ್ ಪ್ರಶ್ನೆಗೆ ತಬ್ಬಿಬ್ಬಾದ ಪೊಲೀಸರು!
ನಾನು ಪ್ರಬುದ್ಧಳಾಗಿದ್ದೇನೆ. ನಾನು ನನ್ನ ಇಷ್ಟದಿಂದ ಕತಾರ್‌ಗೆ ಆಗಮಿಸಿದ್ದೇನೆ. ಅಷ್ಟಕ್ಕೂ ನನಗೆ ಯಾರನ್ನಾದರೂ ಪ್ರೀತಿಸುವ ಹಕ್ಕಿಲ್ಲವೇ..? ಎಂದು ಚೈತ್ರಾ ಹೆಬ್ಬಾರ್ ಪ್ರಶ್ನೆ ಹಾಕಿದ್ಧಾಳೆ.
ಕತಾರ್ ರಾಯಭಾರ ಕಚೇರಿಯಿಂದ ಇಮೇಲ್ ಮತ್ತು ವಾಟ್ಸ್ಯಾಪ್ ಮೂಲಕ ಕಳಿಸಿದ ಆಕೆಯ ಸಂದೇಶದಿಂದ ಪೊಲೀಸ್ ಇಲಾಖೆಯೇ ತಬ್ಬಿಬ್ಬಾಗಿದೆ.
ಚೈತ್ರಾಳನ್ನು ಅಪಹರಣ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಕೆಯ ಬೆನ್ನು ಬಿದ್ದಿದ್ದ ಉಳ್ಳಾಲ ಪೊಲೀಸರು, ಆಕೆಯನ್ನು ವಿವಿಧ ಕಡೆಗಳನ್ನು ಹುಡುಕಾಡಲಾಗಿತ್ತು.
ಚೈತ್ರಾ ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಆಕೆಯ ಖಾತೆಯಿಂದ 40000/- ರೂ. ತೆಗೆಯಲಾಗಿತ್ತು. ಆ ಹಣದಿಂದ ವಿಸಿಟಿಂಗ್ ವೀಸಾ ಪಡೆದುಕೊಂಡು ಆಕೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಈ ಮಧ್ಯೆ, ಚೈತ್ರಾಳ ಪ್ರಿಯಕರ ಎಂದು ಹೇಳಲಾದ ಶಾರೂಕ್‌ನನ್ನು ಪೊಲೀಸರು ಗುರುವಾರ ಹಿಮಾಚಲ ಪ್ರದೇಶದಲ್ಲಿ ಪತ್ತೆ ಹಚ್ಚಿ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಆ ವೇಳೆ, ತಾನು ಮತ್ತು ಚೈತ್ರಾ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಶಾರೂಕ್‌ನನ್ನು ವಿಚಾರಣೆ ನಡೆಸಿದ ಪೊಲಿಸರು ಆತ ವಯಸ್ಕನಾಗಿದ್ದು, ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂಬ ಕಾರಣಕ್ಕೆ ಆತನನ್ನು ಬಿಟ್ಟು ಕಳಿಸಿದ್ದಾರೆ.
ಇನ್ನೊಂದೆಡೆ, ಕತಾರ್‌ನಿಂದ ಸಂದೇಶ ಕಳುಹಿಸಿರುವ ಚೈತ್ರಾ, ತಾನು ಸ್ವ ಇಚ್ಚೆಯಿಂದ ಕತಾರ್‌ಗೆ ಆಗಮಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ನಾನು ಪ್ರಬುದ್ಧಳಾಗಿದ್ದೇನೆ. ನಾನು ನನ್ನ ಇಷ್ಟದಿಂದ ಕತಾರ್‌ಗೆ ಆಗಮಿಸಿದ್ದೇನೆ. ಅಷ್ಟಕ್ಕೂ ನನಗೆ ಯಾರನ್ನಾದರೂ ಪ್ರೀತಿಸುವ ಹಕ್ಕಿಲ್ಲವೇ..? ಎಂಬ ಚೈತ್ರಾ ಪ್ರಶ್ನೆಗೆ ಉತ್ತರ ಕೊಡಲಾಗದೆ ಪೊಲೀಸರು ಪರದಾಡುವಂತಾಗಿದೆ.