ಲಿಟ್ ಫೆಸ್ಟ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಚಾಲನೆ
ಲಿಟ್ ಫೆಸ್ಟ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಚಾಲನೆ
ಸಾಹಿತ್ಯವೆಂದರೆ ಸ್ವಾಧ್ಯಾಯ. ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪದ ಸೃಜನಶೀಲತೆ. ಸೃಜನಶೀಲತೆಯ ಹುಟ್ಟು ಇರುವುದು, ಆದರ್ಶ ಮತ್ತು ನೋವನ್ನು ಆಲಿಸುವ ಸಂವೇದನಾಶೀಲತೆಯ ಸಮ್ಮಿಲನದಲ್ಲಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಚಿಂತಕರು ಮತ್ತು ಸಾಹಿತ್ಯ ಪ್ರಿಯರಿಗಾಗಿ ಆಯೋಜಿಸಲಾದ 6ನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮನ್ನು ಆಳುತ್ತಿರುವುದು ಯಾವುದೇ ಸರ್ಕಾರವಲ್ಲ, ಬದಲಾಗಿ ಭಾಷೆ. ಇದೇ ಭಾಷೆಗೆ ಘೋರವನ್ನು ಸೃಷ್ಟಿಸುವ ಸಾಮರ್ಥ್ಯವಿರುವುದಲ್ಲದೆ ಇದೇ ಶಾಂತಿಯನ್ನೂ ಕಟ್ಟುತ್ತದೆ ಎಂದು ಅವರು ಹೇಳಿದರು.
ಮಂಗಳೂರಿನ ಡಾ ಟಿ ಎಂ ಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಜರುಗಿದ ಉದ್ಘಾಟನಾ ಕಾರ್ಯಕ್ರಮ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು.
ವೇದಿಕೆಯಲ್ಲಿ ಮಿಥಿಕ್ ಸೊಸೈಟಿ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ಎಸ್ ರವಿ ಮತ್ತು ತಮ್ಮ ಸಮಾಜ ಸೇವೆಗಾಗಿ ತಮ್ಮ ಸಂಸ್ಥೆಯ ಪರವಾಗಿ ಸನ್ಮಾನವನ್ನು ಸ್ವೀಕರಿಸಿದ ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಯ ಕಾರ್ಯದರ್ಶಿ ಮಧುರಾ ಹೆಗ್ಡೆಯವರು ಉಪಸ್ಥಿತರಿದ್ದರು.