Start Upಗಳಿಗೆ 50 ಲಕ್ಷ ರೂ. ಸಬ್ಸಿಡಿ ಧನ ಸಹಾಯ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
Start Upಗಳಿಗೆ 50 ಲಕ್ಷ ರೂ. ಸಬ್ಸಿಡಿ ಧನ ಸಹಾಯ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
Start Up ಯೋಜನೆಗಳಿಗೆ ಧನ ಸಹಾಯ ಕೋರಿ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು ವಿಸ್ತರಿಸಲಾಗಿದೆ. ಡಿಸೆಂಬರ್ 23ರ ವರೆಗೆ ಈ ಹಿಂದೆ ಗಡುವು ನೀಡಲಾಗಿತ್ತು. ಈಗ ಅವಧಿ ವಿಸ್ತರಣೆ ಮಾಡಲಾಗಿದ್ದು, 2024ರ ಜನವರಿ 1ರ ವರೆಗೆ ವಿಸ್ತರಿಸಲಾಗಿದೆ.
ಹೊಸ ಸ್ಟಾರ್ಟ್ ಅಪ್‌ಗಳಿಂದ ವಿನೂತನ ಚಿಂತನೆ ಹೊರತಂದು ಪೋಷಿಸುವ ಜೊತೆಗೆ ವಿವಿಧ ಹಂತಗಳಲ್ಲಿ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಙಾನ ಮತ್ತು ಜೈವಿಕ ತಂತ್ರಜ್ಙಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಙಾನ ಇಲಾಖೆಯು ಈ ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯಡಿ ಸ್ಟಾರ್ಟ್ ಅಪ್‌ಗಳಿಗೆ ರೂ. 50 ಲಕ್ಷ ರೂ. ವರೆಗೆ ಸಹಾಯ ಧನ ಸಹಿತ ಸಾಲ ಯೋಜನೆಯನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ 'Start Up ಕರ್ನಾಟಕ' ಇದರ ಅಧಿಕೃತ ವೆಬ್‌ಸೈಟ್‌ನ್ನು ವೀಕ್ಷಿಸಬಹುದು.
website Details: missionstartupkarnataka.org