ಸಂಘ ಪರಿವಾರಕ್ಕೆ ಪುತ್ತಿಲ ಪರಿವಾರ ಠಕ್ಕರ್: ಪುತ್ತೂರಿನಲ್ಲಿ ಕೈ, ಪುತ್ತಿಲ ಬೆಂಬಲಿಗರ ಗೆಲುವು
ಸಂಘ ಪರಿವಾರಕ್ಕೆ ಪುತ್ತಿಲ ಪರಿವಾರ ಠಕ್ಕರ್:
ಪುತ್ತೂರಿನಲ್ಲಿ ಕೈ, ಪುತ್ತಿಲ ಬೆಂಬಲಿಗರ ಗೆಲುವು
ಪುತ್ತೂರಿನ ಎರಡು ಗ್ರಾಮ ಪಂಚಾಯತ್ ಗಳಲ್ಲಿ
ತೆರವಾಗಿದ್ದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಸ್ಥಾನಗಳಲ್ಲಿ ಪರಾಭವ ಕಂಡಿದೆ
ಎರಡು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಬ್ಯಾಟ್ ಚಿಹ್ನೆ ಪಡೆದ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಗೆದ್ದುಕೊಂಡರೆ, ನಿಡ್ಪಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸತೀಶ್ ಶೆಟ್ಟಿ ಬಾಕೆತ್ತಿಮಾರ್ ಗೆಲುವು ದಾಖಲಿಸಿದ್ದಾರೆ.
ಎರಡೂ ಕಡೆಗಳಲ್ಲಿ ಬಿಜೆಪಿ ಬೆಂಬಲಿತರು ಹೀನಾಯ
ಸೋಲು ಕಂಡಿದ್ದು, ಬಿಜೆಪಿ ಮತ್ತು ಸಂಘ ಪರಿವಾರವನ್ನು ಕಂಗೆಡಿಸಿದೆ.
ಆರ್ಯಾಪು:
ಒಟ್ಟು ಮತಗಳು: 1237
ಚಲಾವಣೆ ಆದ ಮತಗಳು: 999
ಸುಬ್ರಹ್ಮಣ್ಯ ಬಲ್ಯಾಯ, ಪುತ್ತಿಲ ಪರಿವಾರ
499
ಪುರುಷೋತ್ತಮ ಪ್ರಭು ಅಬ್ಬುಗದ್ದೆ, ಕಾಂಗ್ರೆಸ್
: 353
ಜಗದೀಶ್ ಭಂಡಾರಿ, ಬಿಜೆಪಿ : 140
ನಿಡ್ಪಳ್ಳಿ:
ಒಟ್ಟು ಮತಗಳು: 607
ಚಲಾವಣೆ ಆದ ಮತಗಳು: 529
ಸತೀಶ್ ಶೆಟ್ಟಿ, ಕಾಂಗ್ರೆಸ್ : 235
ಜಗನ್ನಾಥ ರೈ, ಪುತ್ತಿಲ ಪರಿವಾರ 208
ಚಂದ್ರಶೇಖರ ಪ್ರಭು, ಬಿಜೆಪಿ : 85