![](https://i.ytimg.com/vi/ehDq_Qba2N8/hqdefault.jpg)
ಈಗ ಏನಾದ್ರೂ ಹೇಳ್ತೀರಾ ಸರ್!: ಪ್ರಿಯಾಂಕ ಖರ್ಗೆಗೆ ಬಿ.ಎಲ್. ಸಂತೋಷ್ ಗೇಲಿ...!
ಈಗ ಏನಾದರೂ ಹೇಳೋದಿದೆಯಾ ಸರ್..? ಹೀಗೆಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಿಚಾಯಿಸಿದ್ದಾರೆ.
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳನ್ನು ಬಿಜೆಪಿ ಗೆದ್ದುಕೊಂಡಿರುವ ಹಿನ್ನೆಲೆಯಲ್ಲಿ ಬಿ.ಎಲ್. ಸಂತೋಷ್ ಈ ಲೇವಡಿಯ ಮಾತುಗಳನ್ನಾಡಿದ್ದಾರೆ.
ಗೋಧಿ ಮೀಡಿಯಾ ಟಿವಿ ಸ್ಕ್ರೀನ್‌ಗಳಲ್ಲಿ ಎಲ್ಲ ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಚಿತ್ರಗಳನ್ನು ತೋರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬದಲು ನಡ್ಡಾ ಅವರ ಚಿತ್ರಗಳು ಕಾಣಿಸುತ್ತಿವೆ. ಇದು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರುವುದನ್ನು ಸೂಚಿಸುತತಿದೆ. ಇದೆಲ್ಲ ಪ್ರಾಥಮಿಕ ಜ್ಞಾನ ಮಗು.. ಎಂದು ಅವರು ಬರೆದಿದ್ದರು.
ಫಲಿತಾಂಶದ ಸೋಲನ್ನು ಮೋದಿ ಬದಲಾಗಿ ನಡ್ಡಾ ಅವರ ತಲೆಗೆ ಕಟ್ಟಲು ತಯಾರಿ ನಡೆದಿದೆ ಎಂದು ಖರ್ಗೆ ಸೂಚ್ಯವಾಗಿ ಹೇಳಿದ್ದರು.
ಇದಕ್ಕೆ ಅಷ್ಟೇ ಸೂಚ್ಯವಾಗಿ ಪ್ರತಿಕ್ರಿಯೆ ನೀಡಿರುವ ಬಿ.ಎಲ್. ಸಂತೋಷ್, ಈಗ ಏನು ಹೇಳುತ್ತೀರಿ ಪ್ರಿಯಾಂಕ ಖರ್ಗೆಯವರೇ...? ಎಂದು ಸಂತೋಷ್ ಲೇವಡಿ ಮಾಡಿದ್ದಾರೆ.