-->

ಮಂಗಳೂರು: MRG ಗ್ರೂಪ್‌ನಿಂದ ಅಶಕ್ತರಿಗೆ 4.90 ಕೋಟಿ ರೂ. 'ನೆರವು' ಸಹಾಯಹಸ್ತ

ಮಂಗಳೂರು: MRG ಗ್ರೂಪ್‌ನಿಂದ ಅಶಕ್ತರಿಗೆ 4.90 ಕೋಟಿ ರೂ. 'ನೆರವು' ಸಹಾಯಹಸ್ತ

ಮಂಗಳೂರು: MRG ಗ್ರೂಪ್‌ನಿಂದ ಅಶಕ್ತರಿಗೆ 4.90 ಕೋಟಿ ರೂ. 'ನೆರವು' ಸಹಾಯಹಸ್ತ
ಗೋಲ್ಡ್ ಫಿಂಚ್ ಮಾಲಕರು ಹಾಗೂ ಎಂಆರ್‌ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಬಂಜಾರ ಪ್ರಕಾಶ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಐದನೇ ವರ್ಷದಲ್ಲಿ 4.90 ಕೋಟಿ ರೂ. 'ನೆರವು' ಸಹಾಯಹಸ್ತದ ಚೆಕ್‌ಗಳನ್ನು ಅಶಕ್ತರಿಗೆ ಮತ್ತು ಫಲಾನುಭವಿಗಳಿಗೆ ನೀಡಲಾಯಿತು.2019ನೇ ವರ್ಷದಲ್ಲಿ ಆರಂಭಿಸಿದ ಈ ನೆರವಿನ ಅಭಿಯಾನ ಸತತ ಐದನೇ ವರ್ಷವೂ ಮುಂದುವರಿದ್ದಿದ್ದು, ಈ ಬಾರಿ ನೆರವಿನ ಮೊತ್ತವನ್ನು 4.90 ಕೋಟಿ ರೂ.ಗೇರಿಸಲಾಗಿತ್ತು.ಈ ವರ್ಷದ ದಾನವು ಎಂದಿನಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಾವಿರಾರು ಮನೆಗಳ ಕಷ್ಟಕ್ಕೆ ನೆರವಿನ ಸಹಾಯಹಸ್ತ ಒದಗಿಸಿದೆ.ವಿಕಲಚೇತನರು, ವಿಶೇಷಚೇತನರು, ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿರುವವರು, ವಿದ್ಯಾರ್ಥಿ ವೇತನ, ವಿದ್ಯಾಸಂಸ್ಥೆಗೆ ಶಿಕ್ಷಕರ ನೇಮಕ, ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ, ಕ್ರೀಡೆಗೆ ಪ್ರೋತ್ಸಾಹಿಸಲು, ಶೈಕ್ಷಣಿಕ ಸಾಧಕರಿಗೆ ವಿದ್ಯಾರ್ಥಿ ವೇತನ, ವಿವಿಧ ಸಂಘ-ಸಂಸ್ಥೆಗಳ ಕಾರ್ಯಯೋಜನೆಗಳಿಗೆ ಈ ನೆರವಿನ ಸಹಾಯಹಸ್ತ ನೀಡಿದ್ದಾರೆ.


ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ ಯೋಜನೆಯ 'ನೆರವು' ಕಾರ್ಯಕ್ರಮದಲ್ಲಿ ಈ ಬೃಹತ್ ಮೊತ್ತದ ಹಣವನ್ನು ಅರ್ಹರಿಗೆ ವಿತರಣೆ ಮಾಡಲಾಯಿತು.


ಎಸ್ಒಪಿ ಮಾದರಿ ಪ್ರಕ್ರಿಯೆ ಅನುಸರಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಸ್ವತಂತ್ರ ಸಮಿತಿ ಮುಖೇನ ಅರ್ಹ ಅಶಕ್ತರನ್ನು ಆಯ್ಕೆ ಮಾಡಲಾಗಿದೆ. ಇದರ ಅನುಸಾರ ತಿಂಗಳುಗಳ ಕಾಲದ ಶ್ರಮದಿಂದ ನೆರವಿನ ಸಹಾಯಹಸ್ತಕ್ಕೆ ಪಟ್ಟಿಯನ್ನು ತಯಾರಿಸಲಾಗಿದೆ.


ಫಲಾನುಭವಿಗಳನ್ನು ಸಮಾರಂಭಕ್ಕೆ ಪ್ರಯಾಣವೆಚ್ಚ ಭರಿಸಿಯೇ ಸಮಾರಂಭಕ್ಕೆ ಕರೆತರಲಾಗಿದೆ. ನೆರವು ವಿತರಣೆಗೆ 25 ವಿವಿಧ ಕೌಂಟರ್ ಗಳನ್ನು ತೆರೆಯಲಾಗಿದ್ದು, ಅಲ್ಲಿ ಫಲಾನುಭವಿಗಳು ತಮ್ಮ ಹೆಸರು ಹೇಳಿ ಟೋಕನ್ ಗಳನ್ನು ತೋರಿಸಿ ನೆರವಿನ ಚೆಕ್ ಪಡೆದುಕೊಳ್ಳಬಹುದು.ನೆರವು ಚೆಕ್ ವಿತರಣೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಅವರು ಪ್ರೇರಣಾದಾಯಕ ಮಾತನ್ನಾಡಿದರು. ಕೆ.ಪ್ರಕಾಶ್ ಶೆಟ್ಟಿಯವರು ತಮ್ಮ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಐವರು ಅಶಕ್ತರು, ಶೈಕ್ಷಣಿಕ ಸಾಧಕರು, ಕ್ರೀಡಾ ಸಾಧಕರು, ಮೂರು ಸಂಘ ಸಂಸ್ಥೆಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಯಿತು.


ಒಟ್ಟಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೆರವು ನೀಡಿರುವುದು ಕೆ.ಪ್ರಕಾಶ್ ಶೆಟ್ಟಿಯವರ ಉದಾರತನಕ್ಕೆ ಸಾಕ್ಷಿಯಾಗಿದೆ. ಇವರ ಈ ನೆರವಿನ ಸಹಾಯಹಸ್ತ ಇನ್ನಷ್ಟು ಮಂದಿಗೆ ಪ್ರೇರಣೆ ಆಗಬೇಕಿದೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99