ಗಜಕೇಸರಿ ಯೋಗ ಯಾವೆಲ್ಲ ರಾಶಿಯವರಿಗೆ ಒಳಿತು ಎಂಬುದು ಇಲ್ಲಿದೆ ನೋಡಿ.!
Monday, November 27, 2023
ಮೇಷ ರಾಶಿಯಲ್ಲಿ ಜನಿಸಿದವರಿಗೆ ಗುರುವು ಕಟಕದಲ್ಲಿ ಇದ್ದಲ್ಲಿ ಚಂದ್ರ ಮತ್ತು ಗುರುವಿನ ದಶಾಭುಕ್ತಿಗಳಲ್ಲಿ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ಚಂದ್ರ ಮತ್ತು ಗುರು ಗ್ರಹಗಳು ಮೇಷದಲ್ಲಿಯೇ ಇದ್ದಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ.
ಗುರುವು ತುಲಾ ರಾಶಿಯಲ್ಲಿ ನೆಲೆಸಿದ್ದಲ್ಲಿ ಮಧ್ಯಮ ಫಲಿತಾಂಶಗಳು ದೊರೆಯಲಿದೆ. ಆದರೆ ಗುರುವು ಮಕರದಲ್ಲಿ ಇದ್ದಲ್ಲಿ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚು.
ಕಟಕ ರಾಶಿಯಲ್ಲಿ ಜನಿಸಿದವರಿಗೆ ಚಂದ್ರ ಮತ್ತು ಗುರು ಗ್ರಹಗಳು ಕಟಕದಲ್ಲಿಯೇ ಇದ್ದಲ್ಲಿ ಅತ್ಯುತ್ತಮ ಫಲಿತಾಂಶಗಳು ದೊರೆಯುತ್ತವೆ. ಗುರುವು ಮೇಷದಲ್ಲಿ ಇದ್ದಾಗ ಉತ್ತಮ ಫಲಿತಾಂಶ ದೊರೆಯುತ್ತದೆ.
ಗುರು ಮಕರದಲ್ಲಿ ನೆಲೆಸಿದಾಗ ಸಾಧಾರಣ ಫಲಿತಾಂಶ ದೊರೆಯುತ್ತದೆ. ಆದರೆ ಗುರುವು ಮಕರದಲ್ಲಿ ನೆಲೆಸಿದ್ದಾಗ ಯಾವುದೇ ಫಲಿತಾಂಶಗಳು ದಶಾಭುಕ್ತಿ ಮತ್ತು ಗೋಚಾರವನ್ನು ಅವಲಂಬಿಸಿರುತ್ತದೆ.
ಸಿಂಹ ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರೇ ಸರಿ. ಆದರೆ ಗುರು ಗ್ರಹವು ಸಿಂಹ ರಾಶಿಯಲ್ಲಿ ಇದ್ದಲ್ಲಿ ತಂದೆಯವರ ಅಥವಾ ಕುಟುಂಬದ ಹಿರಿಯರ ಸಹಾಯದಿಂದ ಮಾತ್ರ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯ.
ಗುರುವು ಕನ್ಯಾ ರಾಶಿಯಲ್ಲಿ ಇದ್ದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರದಿಂದ ಮಾತ್ರ ಶುಭಫಲಗಳನ್ನು ಪಡೆಯಬಹುದು. ಮಿಥುನ ರಾಶಿಯಲ್ಲಿ ಗುರುವು ಇದ್ದಲ್ಲಿ ಸಂಗಾತಿಯ, ಕುಟುಂಬದ ಮಹಿಳಾ ಸದಸ್ಯರಿಂದ ಅಥವಾ ಆತ್ಮೀಯರ ಸಹಾಯದಿಂದ ಮಾತ್ರ ಉತ್ತಮ ಫಲಗಳನ್ನು ಪಡೆಯಲು ಸಾಧ್ಯ.
ಮೀನ ರಾಶಿಯಲ್ಲಿ ಜನಿಸಿದವರಿಗೆ ಚಂದ್ರ ಮತ್ತು ಗುರು ಗ್ರಹಗಳು ಧನು ರಾಶಿ ಅಥವಾ ಮೀನ ರಾಶಿಗಳಲ್ಲಿ ಇದ್ದಲ್ಲಿ ಮಾತ್ರ ಉತ್ತಮ ಫಲಗಳು ದೊರೆಯಲು ಸಾಧ್ಯವಾಗುತ್ತದೆ.
ಮೀನ ರಾಶಿಯಲ್ಲಿ ಜನಿಸಿದವರು ಮಾತ್ರ ಉದ್ಯೋಗ ಕ್ಷೇತ್ರದಲ್ಲಿ ಗಜಕೇಸರಿ ಯೋಗದಿಂದ ಅಪರಿಮಿತ ಶುಭ ಫಲಗಳನ್ನು ಪಡೆಯುತ್ತಾರೆ. ಕೆಲವರು ಲಗ್ನವನ್ನು ಮೂಲವಾಗಿಟ್ಟುಕೊಂಡು ಗಜಕೇಸರಿ ಯೋಗವನ್ನು ನಿರ್ಧರಿಸುತ್ತಾರೆ. ಇಂತಹ ಸಂದರ್ಭದಲ್ಲಿಯೂ ಸಹ ಚಂದ್ರನ ಸ್ಥಾನಮಾನವೇ ಮುಖ್ಯವಾಗುತ್ತದೆ.