ಆಸೀಸ್ ವಿಶ್ವಕಪ್ ಗೆಲುವಿಗೂ ಮಂಗಳೂರಿಗೆ ನಂಟು! ಕಾಂಗರೂ ಗೆಲುವಿಗೆ ಮಹಿಳೆಯ ಬಲ!
ಆಸೀಸ್ ವಿಶ್ವಕಪ್ ಗೆಲುವಿಗೂ ಮಂಗಳೂರಿಗೆ ನಂಟು! ಕಾಂಗರೂ ಗೆಲುವಿಗೆ ಮಹಿಳೆಯ ಬಲ!
ಸತತ ಗೆಲುವಿನಿಂದ ಬೀಗುತ್ತಿದ್ದ ಟೀಮ್ ಇಂಡಿಯಾಕ್ಕೆ ಮಣ್ಣು ಮುಕ್ಕಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಗೆಲುವಿನ ಹಿಂದೆ ಮಂಗಳೂರು ನಂಟು ಅಡಗಿದೆ.
ಅಚ್ಚರಿಗೊಳ್ಳಲು ಒಂದು ಕಾರಣವಿದೆ. ಏನಿದು ಮಂಗಳೂರು ನಂಟು ?... ಹೌದು, ಆಸ್ಟ್ರೇಲಿಯಾ ಭರ್ಜರಿ ಗೆಲುವಿನ ಹಿಂದೆ ಮಹಿಳೆಯೊಬ್ಬರ ಕೈವಾಡ ಇದೆ. ಆಕೆ ಬೇರಾರೂ ಅಲ್ಲ, ಆಸ್ಟ್ರೇಲಿಯಾ ಕ್ರಿಕೆ ತಂಡದ ಮ್ಯಾನೇಜರ್ ಊರ್ಮಿಳಾ ರೊಸಾರಿಯೋ. ಈಕೆಯ ಮೂಲ ಕರಾವಳಿ ಕರ್ನಾಟಕದ ಕಿನ್ನಿಗೋಳಿ ಎಂಬ ಪುಟ್ಟ ಊರು.
34 ವರ್ಷದ ಊರ್ಮಿಳಾ ಮೂಲತಃ ಕಿನ್ನಿಗೋಳಿಯ ಐವಿ ಮತ್ತು ವ್ಯಾಲಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಈಕೆಯ ಪೋಷಕರು ಕತಾರ್‌ನ ದೋಹಾದಲ್ಲಿ ಕೆಲಸ ಮಾಡುತ್ತಿದ್ದಾಗ ಊರ್ಮಿಳಾ ಜನಿಸಿದರು.
ಊರ್ಮಿಳಾ ಪೋಷಕರು ಏಳು ವರ್ಷಗಳ ಹಿಂದೆ ಸ್ವದೇಶ ಭಾರತಕ್ಕೆ ಮರಳಿದ್ದು, ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲೇ ನೆಲೆಸಿದ್ದಾರೆ.
ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವಿ ಪಡೆದ ಊರ್ಮಿಲಾ, ಆಸ್ಟ್ರೇಲಿಯಾಕ್ಕೆ ಮರಳಿದರು. ಬಾಲ್ಯದಿಂದಲೇ ಕ್ರೀಡಾಳುವಾಗಿದ್ದ ಊರ್ಮಿಳಾ, ಮೂರು ವರ್ಷಗಳ ಕಾಲ ಕತಾರ್ ಟೆನಿಸ್ ಫೆಡರೇಶನ್‌ಗಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರು.
ಆ ಬಳಿಕ ಆಸ್ಟ್ರೇಲಿಯಾಕ್ಕೆ ಮರಳಿದ ಅವರು ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಮೂರು ವರ್ಷಗಳ ಕಾಲ ಫಿಜಿಯೋ ಆಗಿ ವೈದ್ಯಕೀಯ ವೃತ್ತಿ ನಿರ್ವಹಿಸಿದರು.
ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್‌ನಿಂದ ನಾಲ್ಕು ತಿಂಗಳ ವಿರಾಮ ಪಡೆದುಕೊಂಡ ಅವರು, ಈಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ತಮ್ಮ ವೃತ್ತಿ ಜೀವನಕ್ಕೆ ಹೊಸ ಮೆರುಗು ನೀಡಿದರು.