ವಿದ್ಯುತ್ ಕಳವು- ಮಾಜಿ ಮುಖ್ಯಮಂತ್ರಿಗೆ ಎಫ್‌ಐಆರ್ ಸಂಕಟ
ವಿದ್ಯುತ್ ಕಳವು- ಮಾಜಿ ಮುಖ್ಯಮಂತ್ರಿಗೆ ಎಫ್‌ಐಆರ್ ಸಂಕಟ
ದೀಪಾವಳಿ ಪ್ರಯುಕ್ತ ತಮ್ಮ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ವಿದ್ಯುತ್ ಕಳವು ಮಾಡಿದ ಆರೋಪದ ಮೇಲೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಜೆ.ಪಿ. ನಗರದ ಮೂರನೇ ಹಂತದಲ್ಲಿ ಇರುವ ತಮ್ಮ ಮನೆಗೆ ದೀಪಾವಳಿ ಸಂಭ್ರಮಕ್ಕಾಗಿ ವಿದ್ಯುತ್ತ ಕಳವು ಮಾಡಿದ್ದರು.
ವಿದ್ಯುತ್ ಕಳವನ್ನು ಪತ್ತೆ ಹಚ್ಚಿದ್ದ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯಕ ಎಂಜಿನಿಯರ್ ಆಧ ವಿ. ಪ್ರಶಾಂತ್ ಕುಮಾರ್, ಈ ಬಗ್ಗೆಬೆಸ್ಕಾಂ ಜಾಗೃತ ದಳದ ಬೆಂಗಳೂರು ವೃತ್ತ ವ್ಯಾಪ್ತಿಯ ಜೆಪಿ ನಗರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ವಿದ್ಯುಚ್ಚಕ್ತಿ ಕಾಯ್ದೆ 2003ರ ಸೆಕ್ಷನ್ 135ರ ಪ್ರಕಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪ ಸಾಬೀತಾದರೆ ಮೂರು ವರ್ಷ ಜೈಲು ಅಥವಾ ದಂಡ ವಿಧಿಸಲೂ ಕಾನೂನು ಅವಕಾಶ ನೀಡುತ್ತದೆ.