ಕಿನ್ನಿಗೋಳಿ: ಅಸಹಜ ಸಾವಿಗೀಡಾದ ವೃದ್ಧ ಮಹಿಳೆ: ತಾಯಿಯನ್ನೇ ಕೊಲೆಗೈದ ಮಗ?
ಕಿನ್ನಿಗೋಳಿ: ಅಸಹಜ ಸಾವಿಗೀಡಾದ ವೃದ್ಧ ಮಹಿಳೆ: ತಾಯಿಯನ್ನೇ ಕೊಲೆಗೈದ ಮಗ?
ಕಿನ್ನಿಗೋಳಿ: ತಮಹಿಳೆಯೋರ್ವರು ಅಸಹಜ ರೀತಿಯಲ್ಲಿ ತಮ್ಮ ಮನೆಯಲ್ಲೇ ಮೃತಪಟ್ಟಿರುವ ಘಟನೆ ಮಂಗಳೂರು ತಾಲೂಕು ಕಟೀಲು ಸಮೀಪದ ಕೊಂಡೆಲಾದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ರತ್ನಾ ಶೆಟ್ಟಿ (60 ವರ್ಷ ಪ್ರಾಯ) ಎಂದು ಗುರುತಿಸಲಾಗಿದೆ. ಈಕೆಯನ್ನು ಮಗನೇ ಕೊಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ರತ್ನಾ ಶೆಟ್ಟಿ ಅವರು ಕಟೀಲು ಸಮೀಪದ ಕೊಂಡೇಲಾ ದುರ್ಗಾ ನಗರ ಎಂಬಲ್ಲಿನ ನಿವಾಸಿಯಾಗಿದ್ದು, ತಾವು ವಾಸ್ತವ್ಯವಿದ್ದ ಮನೆಯ ಕೋಣೆಯೊಳಗೆ ಅಸಹಜವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದೊಂದು ಅಸಹಜ ಕೊಲೆ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು, ಈ ಕೃತ್ಯದ ಹಿಂದೆ ವೃದ್ಧ ಮಹಿಳೆಯ ಪುತ್ರ ರವಿರಾಜ್ ಶೆಟ್ಟಿ ಎಂಬಾತನ ಕೈವಾಡ ಇದೆ ಎಂದು ಹೇಳಲಾಗಿದೆ. ಈ ಸಂಶಯದ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ರವಿರಾಜ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
(GK News) ಮೃತ ಮಹಿಳೆ ರತ್ನಾ ಶೆಟ್ಟಿ ಕಟೀಲು ಗ್ರಾಮದ ದುರ್ಗಾ ನಗರದಲ್ಲಿ ತನ್ನ ಪುತ್ರ ರವಿರಾಜ್ ಶೆಟ್ಟಿ ಜೊತೆಗೆ ವಾಸವಾಗಿದ್ದರು. ರತ್ನಾ ಶೆಟ್ಟಿ ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ಅನಾರೋಗ್ಯದ ನಿಮಿತ್ತ ಅವರು ಶುಕ್ರವಾರ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಪುತ್ರ ರವಿರಾಜ್ ಶೆಟ್ಟಿ ತನ್ನ ತಾಯಿ ಜತೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾನೆ. ರವಿವಾರ ಬೆಳಗ್ಗೆ ಮನೆಯ ಪರಿಸರದಲ್ಲಿ ಶವದ ವಾಸನೆ ಬರುತ್ತಿರುವುದನ್ನು ಕಂಡು ಅನುಮಾನದಿಂದ ಮನೆಯವರು ಮಹಿಳೆ ವಾಸ್ತವ್ಯವಿದ್ದ ಕೋಣೆಯ ಕಿಟಕಿಯ ಮೂಲಕ ಇಣುಕಿದರು. ಆಗ, ರತ್ನ ಶೆಟ್ಟಿ ಅವರು ಮುಖಕ್ಕೆ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದರು. ಕೂಡಲೇ ಸ್ಥಳೀಯರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
(GK News) ಈ ಸುದ್ದಿ ತಿಳಿಯುತ್ತಿದ್ದಂತೆಯೇ, ತಾಯಿಯ ಶವ ಪತ್ತೆಯಾದ ಬಗ್ಗೆ ಸ್ಥಳೀಯರಿಗೆ ಮಾಹಿತಿ ಬಂದ ಕೂಡಲೇ ಆರೋಪಿ ರವಿರಾಜ್ ಶೆಟ್ಟಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಅಪರಾಧ ನಡೆದ ಘಟನಾ ಸ್ಥಳಕ್ಕೆ ಮಂಗಳೂರಿನ ನಗರ ಪೊಲೀಸ್ ಆಯುಕ್ತ ಅನುಪಂ ಆಗರ್‌ವಾಲ್, ಸಹಾಯಕ ಪೊಲೀಸ್ ಕಮಿಷನರ್ ಮನೋಜ್ ಕುಮಾರ್, ಶ್ವಾನ ದಳ, ಬೆರಳಚ್ಚು ತಜ್ಞರು, ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ. (GK News)