
ಮಂಗಳೂರು: ಗುಪ್ತವಾರ್ತೆ ವಿಭಾಗದ ಹೆಡ್‌ಕಾನ್ಸ್‌ಟೆಬಲ್ ನಿಧನ
ಮಂಗಳೂರು: ಗುಪ್ತವಾರ್ತೆ ವಿಭಾಗದ ಹೆಡ್‌ಕಾನ್ಸ್‌ಟೆಬಲ್ ನಿಧನ
ಮಂಗಳೂರು ಪೊಲೀಸ್ ಇಲಾಖೆಯ ಇಂಟೆಲಿಜೆನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೆಬಲೊಬ್ಬರು ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರನ್ನು 48 ವರ್ಷದ ಚಂದ್ರ ಕೆ. ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನ ಅಡೂರು ನಿವಾಸಿಯಾಗಿದ್ದಾರೆ.
1996ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಚಂದ್ರ, ಇಲಾಖೆಯಲ್ಲಿ ಭಡ್ತಿ ಆದೇಶದ ನಿರೀಕ್ಷೆಯಲ್ಲಿ ಇದ್ದರು. ಎಎಸ್‌ಐ ಆಗಿ ಭಡ್ತಿ ಹೊಂದುವ ಬ್ಯಾಚ್‌ನಲ್ಲಿ ಅವರ ಹೆಸರಿತ್ತು.
ಮಂಗಳೂರು ಸಿಸಿಬಿ, ಪಾಂಡೇಶ್ವರ, ಸಿಸಿಆರ್‌ಬಿ, ಡಿಸಿಐಬಿ, ಸೆನ್ ಹಾಗೂ ಕದ್ರಿ ಪೊಲೀಸ್ ಠಾಣೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು.
ಇತ್ತೀಚಿಗಷ್ಟೆ ತೀವ್ರ ಅಸೌಖ್ಯಕ್ಕೀಡಾದ ಚಂದ್ರ ಕೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.