UDUPI : ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿ
Thursday, August 10, 2023
ಉಡುಪಿಯ ಕೋಡಿ ಬೇಂಗ್ರೆಯಲ್ಲಿ ಮೀನಿನ ಸುಗ್ಗಿಯಾಗಿದೆ.
ಸಮುದ್ರದಲ್ಲಿ ಮೀನುಗಾರರ ಬಲೆಗೆ ರಾಶಿ ರಾಶಿ ಮೀನುಗಳು ಬಿದ್ದಿದ್ದು ಮೀನುಗಾರಿಗೆ ಬಂಪರ್ ಲಾಭವಾಗಿದೆ.
ಮೀನುಗಾರರು ಬೀಸಿದ ಕೈರಂಪನಿ ಬಲೆಗೆ ಬೂತಾಯಿ, ಬುಂಗುಡೆ ಸಹಿತ ರಾಶಿ ರಾಶಿ ಮೀನುಗಳು ಬಿದಿದ್ದು, ಭರ್ಜರಿ ಮತ್ಸ್ಯ ಬೇಟಿಯಿಂದ ಮೀನುಗಾರರು ಪುಲ್ ಖುಷ್ ಆಗಿದ್ದಾರೆ. ರಾಶಿ ರಾಶಿ ಮೀನಿ ನೋಡಲು ಕಡಲ ತಡಿಯ ನಿವಾಸಿಗಳು ಆಗಮಿಸಿ, ಸಮುದ್ರ ಬದಿ ಬಿದ್ದ ಮೀನುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿಕೊಂಡು ಹೋಗಿದ್ದಾರೆ.