ಎಂಟೂವರೆ ವರ್ಷದ ಬಾಲಕ Pollice ಇನ್ಸ್ಪೆಕ್ಟರ್
Thursday, August 17, 2023
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಎಂಟೂವರೆ ವರ್ಷದ ಬಾಲಕ ಅಧಿಕಾರ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾನೆ. ಇದು ಹೃದಯ ಸಂಬಂಧಿ ಕಾಯಿಲೆ ಇದ್ದ ಬಾಲಕನ ಆಸೆ.
ಪೊಲೀಸ್ ಅಧಿಕಾರಿಗಳು ನೆರವೇರಿಸಿದ ಅಪೂರ್ವ ಗಳಿಗೆ. ಎಂಟೂವರೆ ವರ್ಷದ ಬಾಲಕ ಆಜಾನ್ ಖಾನ್‌ಗೆ ಒಂದು ಗಂಟೆ ಕಾಲ ಇನ್ಸ್ಪೆಕ್ಟರ್ ಆಗುವ ಅವಕಾಶ ಸಿಕ್ಕಿತ್ತು. ಖುದ್ದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇನ್ಸ್ ಪೆಕ್ಟರ್‌ಗೆ ಸ್ವಾಗತ ಮಾಡಿ ಅಧಿಕಾರ ವಹಿಸಿಕೊಟ್ಟರು. ಇನ್ಸ್ಪೆಕ್ಟರ್ ಖುರ್ಚಿಯಲ್ಲಿ ಕುಳಿತ ಕೂಡಲೇ ಸಿಬ್ಬಂದಿ ಆರೋಗ್ಯ ವಿಚಾರಿಸಿ ರಜೆ ಕೂಡ ಮಂಜೂರು ಮಾಡಿದ. ಕಳ್ಳರಿಗೆ ಆವಾಜ್ ಹಾಕಿ ಇನ್ಮುಂದೆ ಇಂತಹ ಕೆಲಸ ಮಾಡದಂತೆ ಸಲಹೆ ಕೂಡ ನೀಡಿದ.
ಬಾಲಕನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಇತ್ತು. ಆದರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರಿಂದ ಪೋಷಕರ ಕೋರಿಗೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ಗಂಟೆ ಅಧಿಕಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು.