UDUPI ; ಹೆಜಮಾಡಿ ಟೋಲ್ ಗೇಟ್‌ನಲ್ಲಿ ಹೊಡೆದಾಟ
Tuesday, August 29, 2023
ಉಡುಪಿಯ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಸಿಬ್ಬಂದಿ ಹಾಗೂ ಯುವಕರ ತಂಡದ ಮಧ್ಯೆ ವಾಗ್ವಾದ ನಡೆದು ಹೊಡೆದಾಟವಾಗಿದೆ.
ಬೆಂಗಳೂರಿನಿಂದ ಉಡುಪಿಯ ಕಡೆ ಯುವಕರ ತಂಡವೊಂದು ಫಾಸ್ಟ್ ಟ್ಯಾಗ್ ಇಲ್ಲದ ಕಾರಿನಲ್ಲಿ ಬರುತ್ತಿತ್ತು. ಹೆಜಮಾಡಿ ಟೋಲ್ ಗೇಟ್‌ನಲ್ಲಿ ಪಾಸ್ಟ್ ಟ್ಯಾಗ್ ಇಲ್ಲದ ಕಾರಣ ಟೋಲ್ ಹಣ ಕೊಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಕಾರಿನಲ್ಲಿದ್ದ ಯುವಕರು, ಟೋಲ್ ಗೇಟ್ ತೆಗೆದು ಕಾರ್ ಪಾಸ್ ಮಾಡಿದ್ದು, ಈ ವೇಳೆ ಟೋಲ್ ಸಿಬ್ಬಂದಿ ಹಾಗೂ ಯುವಕರ ನಡುವೆ ವಾಗ್ವಾದ ನಡೆದು ಹೊಡೆದಾಟ ನಡೆದಿದೆ. ಕೊನೆಗೆ ಸ್ಥಳೀಯರು ಬಂದು ಸಮಾಧಾನ ಪಡಿಸಿ, ಯುವಕರ ತಂಡವನ್ನು ಕಳುಹಿಸಿದ್ದಾರೆ. ಸದ್ಯ ಟೋಲ್ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.