UDUPI ; ಸಮುದ್ರಪಾಲಾಗಿದ್ದ ಮೀನುಗಾರರ ಶವ ಪತ್ತೆ
Monday, August 28, 2023
ಉಡುಪಿಯ ಬೈಂದೂರಿನಲ್ಲಿ ಮೀನುಗಾರಿಕೆ ಎದುರಲಿದ್ದ ಸಂದರ್ಭ ಆಯತಪ್ಪಿ ಸಮುದ್ರ ಪಾಲಾಗಿದ್ದ ಇಬ್ಬರು ಮೀನುಗಾರರ ಶವ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಬ್(22) ಹಾಗೂ ನಝಾನ್(24) ಮೃತಪಟ್ಟ ದುದೈವಿಗಳು.
ಮೊದಲಿನಿಂದಲೂ ಮೀನುಗಾರಿಕಾ ವೃತ್ತಿ ನಡೆಸುತ್ತಿದ್ದ ನಾಲ್ವರು ಮೀನುಗಾರರು ನಿನ್ನೆ ಸಂಜೆಯ ವೇಳೆಗೆ ಕೈರಂಪಣಿ ಬಲೆ ಮೂಲಕ ಮೀನುಗಾರಿಕೆ ನಡೆಸಲು ತೆರಳಿದ್ದರು. ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಸಮುದ್ರ ಪಾಲಾಗಿದ್ದಾರೆ. ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾರರು ಶೋಧಕ್ಕಾಗಿ ಪ್ರಯತ್ನಿಸಿದ್ದರು, ಸಮುದ್ರಪಾಲಾದವರು ಪತ್ತೆಯಾಗಿರಲಿಲ್ಲ. ಇಬ್ಬರ ಶವವು ದೋಣಿಯಿಂದ ಆಯತಪ್ಪಿ ಬಿದ್ದ ಜಾಗದಿಂದ ಸುಮಾರು 300 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.