UDUPI ; ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿ ಚರಂಡಿಗೆ ಬಿದ್ದು ಸಾವು
Saturday, July 1, 2023
ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ.
ಶಿರ್ವ-ಕಟಪಾಡಿ ಮುಖ್ಯ ರಸ್ತೆಯ ಮಸೀದಿ ಬಳಿಯ ನಿವಾಸಿ,
ಸತೀಶ್ ಆಚಾರ್ಯ(58) ಸಾವನ್ನಪ್ಪಿದ ವ್ಯಕ್ತಿ. ಮನೆಯ ಹತ್ತಿರದ ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿದ್ದ ಸತೀಶ್ ಅವರನ್ನು, ಮನೆಯವರು ಅಂಬುಲೆನ್ಸ್‌ನಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದಿದ್ದರು, ಅದ್ರೆ ಅಲ್ಲಿ ವೈದ್ಯರಿಲ್ಲದ ಕಾರಣ ಉಡುಪಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.