ಅಬುಧಾಬಿಯ ಲಾಟರಿಯಲ್ಲಿ 45 ಕೋಟಿ ಗೆದ್ದ ಕೇರಳದ ನರ್ಸ್ !
Sunday, June 4, 2023
ತಿರುವನಂತಪುರಂ: ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ನರ್ಸ್ ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ ಗೆದ್ದಿದ್ದಾರೆ. ಇದರ ಮೌಲ್ಯ ಭಾರತದ 45 ಕೋಟಿ ರೂಪಾಯಿ ಆಗಿದೆ.
ಲವ್ಲ್ಮೋಲ್ ಅಚಾಮಾ ಎಂಬ ನರ್ಸ್ ಗೆ ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಈ ಬಂಪರ್ ಲಾಟರಿ ಹೊಡೆದಿದೆ. ಇವರು ಅಬುಧಾಬಿಯಲ್ಲಿ ಕಳೆದ 21 ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಲವ್ಲ್ಮೋಲ್ ಅಚಾಮಾ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾರೆ. ತನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಈ ಬಹುಮಾನದ ಮೊತ್ತದ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಅವರು, ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.ಅಲ್ಲದೇ, ಶನಿವಾರ ನಡೆದ ಇತರ ಡ್ರಾಗಳಲ್ಲಿ ನಾಲ್ಕು ಮಂದಿ ಕೇರಳಿಗರು ಬಂಪರ್ ಬಹುಮಾನ ಗೆದ್ದಿದ್ದಾರೆ.
UAE ಯ ರಾಜಧಾನಿ ಅಬುಧಾಬಿಯು ಕಳೆದ ಐದು ದಶಕಗಳಿಂದ ಅನೇಕ ವಲಸಿಗ ಕೇರಳೀಯರ ನೆಲೆಯಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಕೇರಳದಲ್ಲೂ ಓಣಂ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 25 ಕೋಟಿ ರೂಪಾಯಿ ಬಹುಮಾನ ಬಂದಿತ್ತು. ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಆಟೋ ರಿಕ್ಷಾ ಚಾಲಕ ಕಮ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಅನೂಪ್ ಎಂಬುವವರಿಗೆ ಈ ಲಕ್ ಖುಲಾಯಿಸಿತ್ತು. ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದ ಈ ಅನೂಪ್ ಇದಕ್ಕಾಗಿ 3 ಲಕ್ಷ ರೂಪಾಯಿಗಳ ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ಅಂಗೀಕಾರವಾದ ಮರು ದಿನವೇ 25 ಕೋಟಿ ರೂ.ಗಳ ಬಂಪರ್ ಬಹುಮಾನ ಅವರಿಗೆ ದೊರೆದಿತ್ತು. ಅನೂಪ್ ಗೆದ್ದಿರುವ ಅಷ್ಟೂ ಹಣಕ್ಕೆ ಶೇ.30 ಕ್ಕಿಂತಲೂ ಹೆಚ್ಚು ತೆರಿಗೆ ಕಟ್ಟಬೇಕು. ಅಂದರೆ ಗೆದ್ದ 25 ಕೋಟಿ ರೂಪಾಯಿಗಳಲ್ಲಿ 10 ಕೋಟಿಯಷ್ಟು ತೆರಿಗೆ ರೂಪದಲ್ಲಿ ಕಡಿತವಾಗಿ ಅನೂಪ್ಗೆ 15 ಕೋಟಿ ರೂಪಾಯಿ ಸಿಗುತ್ತೆ ಎಂದು ಸುದ್ದಿಯಾಗಿತ್ತು.