
UDUPI : ಖ್ಯಾತ ಹಿರಿಯ ವೈದ್ಯ ಡಾ. ಕೆ. ಎಸ್ ಬನ್ನಿಂತಾಯ ನಿಧನ
Monday, April 3, 2023
50ಕ್ಕೂ ಹೆಚ್ಚು ವರ್ಷಗಳಿಂದ ಉಡುಪಿ ಸಮೀಪದ ಉದ್ಯಾವರದ ಮಠದಂಗಡಿಯಲ್ಲಿ ಕಿರಣ್ ಕ್ಲಿನಿಕ್ 'ನಡೆಸುತ್ತಿದ್ದ ಖ್ಯಾತ ಹಿರಿಯ ವೈದ್ಯ ಡಾ. ಕೆ. ಎಸ್ ಬನ್ನಿಂತಾಯ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಉದ್ಯಾವರದ ಪ್ರಸಿದ್ಧ ಗಣಪತಿ ದೇವಸ್ಥಾನದ ಜೀರ್ನೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿದ್ದ ಅವರು, ಇಲ್ಲಿ ನಡೆಯುತ್ತಿದ್ದ ಸಭೆಗೆ ಹಾಜರಾಗಿದ್ದರು.
ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಅವರ ಪ್ರಾಣ ಹೋಗಿತ್ತು. ವೈದ್ಯ ಡಾ. ಕೆ. ಎಸ್ ಬನ್ನಿಂತಾಯ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.