-->

ವೃದ್ಧಗೆ ಅಸಹಜ ಲೈಂಗಿಕ ಕಿರುಕುಳ : ಯುವಕ ಆರೆಸ್ಟ್

ವೃದ್ಧಗೆ ಅಸಹಜ ಲೈಂಗಿಕ ಕಿರುಕುಳ : ಯುವಕ ಆರೆಸ್ಟ್

ಮೂಡುಬಿದಿರೆ: ಹೋಂ ನಸ್ ೯ ಆಗಿ  ಸೇವೆ ಮಾಡಲು ಬಂದು   ವೃದ್ಧಗೆ  ಅಸಹಜ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಯುವಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.
 ಕೊಡಂಗಲ್ಲು ಬಳಿಯ  ಹುಡ್ಕೊ ಕಾಲನಿಯ  ನಿವಾಸಿ 68ರ ಹರೆಯದ ವೃದ್ಧಗೆ  ಹೋಂ ನಸ್ ೯ ಆಗಿ ಗದಗದ  19 ರ ಯುವಕ  ಶಿವಾನಂದ ಎಂಬಾತ ಕೆಲವು ಸಮಯದಿಂದ   ನೋಡಿಕೊಳ್ಳುತ್ತಿದ್ದ. ವೃದ್ಧ ಕೆಲವು ದಿನಗಳಿಂದ ಮಂಕಾಗಿದ್ದರಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗಿತ್ತು. ಪದೇ ಪದೇ ವೃದ್ಧ ಅವರು ಉಷಾರು ತಪ್ಪುತ್ತಿದ್ದರಿಂದ ಸಂಶಯಗೊಂಡ  ಮನೆಯವರು ಯುವಕನ ಗಮನಕ್ಕೆ ಬಾರದಂತೆ ಕೋಣೆಗೆ ಸಿಸಿ ಕೆಮರಾವನ್ನು ಅಳವಡಿಸಿದ್ದು ಅದರಲ್ಲಿ ಯುವಕ ವೃದ್ಧಗೆ ಹೊಡೆದು ಅಸಹಜ  ಲೈಂಗಿಕ ಕ್ರಿಯೆ ಒತ್ತಾಯಿಸುತ್ತಿರುವುದು ವೀಡಿಯೋ ಚಿತ್ರೀಕರಣಗೊಂಡಿದೆ. 
 ಗೋಪಾಲ ಗೌಡ ಅವರ ಮಕ್ಕಳು ಹೋಂ ನಸ್ ೯ ಶಿವಾನಂದನ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ತಕ್ಷಣ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಯುವಕ ಏಜೆನ್ಸಿ ಯುವಕ ಹೋಂ ನಸ್ ೯ ಆಗಿ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99