-->

ನಾನು ಬಡವ ಎಂದು ಹೇಳುವ ಶಾಸಕರು ಇದೀಗ ಎಷ್ಟು ಕೋಟಿಯ ಧನಿಕ ಎಂಬುದನ್ನು ಸಾಬೀತು ಪಡಿಸಲಿ -‌ ಮಾಜಿ ಸಚಿವ ಅಭಯಚಂದ್ರ ಜೈನ್  ಸವಾಲು

ನಾನು ಬಡವ ಎಂದು ಹೇಳುವ ಶಾಸಕರು ಇದೀಗ ಎಷ್ಟು ಕೋಟಿಯ ಧನಿಕ ಎಂಬುದನ್ನು ಸಾಬೀತು ಪಡಿಸಲಿ -‌ ಮಾಜಿ ಸಚಿವ ಅಭಯಚಂದ್ರ ಜೈನ್ ಸವಾಲು

ಮೂಡುಬಿದಿರೆ:  ಐಬಿಯನ್ನು ಕೆಡವಲು ಹೊರಟಿರುವುದು ಓರ್ವ ಅನ್ನ ತಿನ್ನುವ ವ್ಯಕ್ತಿ ಮಾಡುವ ಕೆಲಸವಲ್ಲ.  ಮರಳು ದಂಧೆಕೋರರಿಗೆ ಪ್ರೋತ್ಸಾಹ ನೀಡುತ್ತಿರುವುದು ಸರಿಯಲ್ಲ. ಪುರಸಭೆಯಿಂದ ಅನುಮತಿ ಪಡೆದುಕೊಳ್ಳದೆ ಇದೀಗ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ  ನಂದಿನಿ ಹಾಲಿನ ಡೈರಿಯನ್ನು ಮಾಡಿಕೊಡುತ್ತಿದ್ದಾರೆ ಹೀಗೆ ಹಲವು ಭ್ರಷ್ಟಾಚಾರದಲ್ಲಿ ಶಾಸಕರು ಶಾಮೀಲಾಗುತ್ತಿದ್ದಾರೆಂದು ಮಾಜಿ ಸಚಿವ ಅಭಯಚಂದ್ರಜೈನ್ ಆರೋಪಿಸಿದರು.
ಅವರು ತಾಲೂಕು ಕಚೇರಿ ಸೇರಿದಂತೆ ಇಲ್ಲಿನ ವಿವಿಧ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರ ಕಾರ್ಯವೈಖರಿಯನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ  ತಾಲೂಕು ಆಡಳಿತ ಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಕಾಮಗಾರಿಗಳನ್ನು ತನ್ನ ಸಂಬಂಧಿಕರಿಗೆ ಕಾಂಟ್ರಾಕ್ಟ್ ನೀಡಿ ತಾನು ಕೋಟಿ ಸಂಪಾದಿಸುತ್ತಿದ್ದರೂ ನಾನು ಬಡವ ನಾನು ಬಡವ ಎಂದು ಹೇಳುವ ಮೂಡುಬಿದಿರೆಯ ಶಾಸಕರು ಇದೀಗ ಎಷ್ಟು ಕೋಟಿಯ ಧನಿಕ ಎಂಬುದನ್ನು ಸಾಬೀತು ಪಡಿಸಲಿ ಎಂದು  ಸವಾಲೆಸೆದಿದ್ದಾರೆ.
 ಹಿಂದಿನ ಶಾಸಕರು ಶ್ರೀಮಂತರು ಎಂದು ಹೇಳುತ್ತಿದ್ದ ಶಾಸಕರು ಇದೀಗ ನಮಗಿಂತ ಹತ್ತುಪಟ್ಟು ಆಸ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ  ಬಡವ ಹೋಗಿ ಬಡುವು ಆಗಿದ್ದಾರೆ ಎಂದು ಆರೋಪಿದರು. ತನ್ನ ಶಾಸಕತ್ವದ ಅವಧಿಯಲ್ಲಿ ರಿಕ್ಷಾ ಬಿಡುತ್ತಿದ್ದವರು ಈಗ ಕೋಟ್ಯಾಧಿಪತಿಗಳಾಗಿದ್ದಾರೆ. ಶಾಸಕರ ಸಂಬಂಧಿಕರು ಕೋಟ್ಯಾಧಿಪತಿಗಳಾಗುತ್ತಿದ್ದಾರೆ ಇದರಿಂದ ಗೊತ್ತಾಗುತ್ತಿದೆ ಎಂಎಲ್ ಎ ಎಷ್ಟು ಒಳ್ಳೆಯವರೆಂದು. ಬೇರೆ ಎಲ್ಲಾ ಕಾಮಗಾರಿಗಳನ್ನು ಅತೀ ವೇಗದಲ್ಲಿ  ಮಾಡಿಕೊಡುತ್ತಿರುವ ಶಾಸಕರು ಯುಜಿಡಿ ಮತ್ತು ಮಾರ್ಕೆಟ್‌ ಬಗ್ಗೆ ಕಾರ್ಯಪ್ರವೃತರಾಗಲಿ ಎಂದು ಕಿಡಿಕಾರಿದರು.
  ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ಭ್ರಷ್ಟಾಚಾರದ ಸರಕಾರ ಬಿಜೆಪಿ. ಇಲ್ಲಿನ ಶಾಸಕರು ಮತ್ತು ಅವರ ಆಪ್ತರು ಶೇ 40 ಕಮೀಷನ್ ಗಾಗಿ ಇರುವವರು ಮತ್ತು ಸರಕಾರದ ಬೊಕ್ಕಸವನ್ನು ಲೂಟಿ ಮಾಡುವವರು ಎಂದು ಆರೋಪಿಸಿದರು.
 ತಾಲೂಕು ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99