
ಕಡಲಕೆರೆ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಸ್ಥಳೀಯರಲ್ಲಿ ಭೀತಿಯ ವಾತಾವರಣ
ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಪ್ರದೇಶದಲ್ಲಿ ಸುಮಾರು ಹತ್ತಾರು ಎಕ್ರೆ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಭೀತಿಯ ವಾತಾವರಣ ಸೃಷ್ಟಿಯಾಗಿದೆ
ಕಡಲಕೆರೆ ಹಾಗೂ ಕಡ್ಲಗುಡ್ಡೆ ಪ್ರದೇಶದ ಖಾಸಗಿ ಜಾಗ ಮತ್ತು ಸರಕಾರಿ ಜಾಗದ ಆವರಣದಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಸುಮಾರು 10-20ಎಕ್ರೆ ಪ್ರದೇಶದಲ್ಲಿ ಹೊಗೆ ತುಂಬಿಕೊಂಡಿದೆ. ನಿಸರ್ಗಧಾಮದ ಸಾಲುಮರ ತಿಮ್ಮಕ್ಕು ಉದ್ಯಾನವನ, ಕಡಲಕೆರೆ ತಾಣ, ಕೈಗಾರಿಕಾ ಪ್ರದೇಶಗಳು ಕೂಡ ಹೊಗೆಯಿಂದ ತುಂಬಿಕೊಂಡಿದೆ.
ಕಡಲಕೆರೆಯ ಅಗ್ನಿಶಾಮಕ ದಳದ ಪಕ್ಕದ ಪ್ರದೇಶಗಳಲ್ಲೇ ಕಾಡು ಪ್ರದೇಶ, ಮುಳಿಹುಲ್ಲಿನ ಆವರಣಗಳಲ್ಲಿ ಬೆಂಕಿ ಉರಿಯುತ್ತಿದೆ. ಇಂದು ಬೆಳಿಗ್ಗೆ ಸುಮಾರು 10 ಗಂಟೆಯಿಂದ ಬೆಂಕಿ ಹತ್ತಿಕೊಳ್ಳಲಾರಂಭಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ವಾಹನ ಗುಡ್ಡಪ್ರದೇಶಕ್ಕೆ ತೆರಳಿ ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.