ಚೆನ್ನೈ: ನಟಿ ಅನಿಕಾ ವಿಜಯ್ ವಿಕ್ರಮನ್ ಮೇಲೆ ಮಾಜಿ ಪ್ರಿಯಕರ ಹಲ್ಲೆ!
Monday, March 6, 2023
ಚೆನ್ನೈ: ತಮಿಳು ನಟಿ ಅನಿಕಾ ವಿಜಯ್ ವಿಕ್ರಮನ್ ಅವರನ್ನು ಮಾಜಿ ಪ್ರಿಯಕರ ಚಿತ್ರಹಿಂಸೆ ನೀಡಿ, ಹಲ್ಲೆ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಿಯತಮ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅನಿಕಾ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಮಾಜಿ ಪ್ರಿಯತಮ ನಟಿ ಅನಿಕರನ್ನು ಅತ್ಯಂತ ಕ್ರೂರವಾಗಿ ಥಳಿಸಿದ್ದಾನೆ ಎಂದು ಆರೋಪ ಮಾಡಿ ಫೋಟೋ ಸಮೇತಾ ಬಿಚ್ಚಿಟ್ಟಿದ್ದಾರೆ. ನಟಿ ಅನಿಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭೀಕರವಾಗಿರುವ ಫೋಟೋಗಳು ನೋಡಿ ಅಭಿಮಾನಿಗಳು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.
ಫೋಟೋಗಳನ್ನು ಶೇರ್ ಮಾಡಿ ನಟಿ ಅನಿಕಾ ಈ ಕ್ರೂರ ಕೃತ್ಯದಿಂದ ಆದಷ್ಟು ಬೇಗ ಹೊರಬಂದು ತನ್ನ ಬದುಕನ್ನು ಮರಳಿ ಪಡೆದುಕೊಳ್ಳುತ್ತೇನೆ, ನಟನಾ ವೃತ್ತಿಗೆ ವಾಪಾಸ್ ಆಗುವುದಾಗಿ ಹೇಳಿದ್ದಾರೆ. ಅನಿಕಾ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಆಕೆಯ ಮುಖದ ಮೇಲೆ ಮಾರಣಾಂತಿಕ ಗಾಯಗಳಾಗಿವೆ. ಕಣ್ಣಿನ ಸುತ್ತಾ ರಕ್ತ ಹೆಪ್ಪುಗಟ್ಟಿದೆ. ಮುಖ, ಎದೆ, ಕೈ ಮೇಲೂ ಗಾಯಗಳಾಗಿವೆ.