-->
ಬಂಟ್ವಾಳ: ಹಣದಾಸೆಗೆ ಮನೆಯಲ್ಲೇ ಅಕ್ರಮವಾಗಿ ಸ್ವಿಮ್ಮಿಂಗ್ ಫೂಲ್‌ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಇಸ್ರೇಲ್ ಉದ್ಯಮಿ

ಬಂಟ್ವಾಳ: ಹಣದಾಸೆಗೆ ಮನೆಯಲ್ಲೇ ಅಕ್ರಮವಾಗಿ ಸ್ವಿಮ್ಮಿಂಗ್ ಫೂಲ್‌ ನಿರ್ಮಿಸಿ ಬಾಡಿಗೆ ನೀಡುತ್ತಿರುವ ಇಸ್ರೇಲ್ ಉದ್ಯಮಿ

ಇಸ್ರೇಲ್‌ನ ಉದ್ಯಮಿಯೊಬ್ಬ ಬಸ್ತಿಕೋಡಿಯಲ್ಲಿನ ತನ್ನ ಮನೆಯ ಸ್ವಿಮ್ಮಿಂಗ್ ಫೊಲ್ ಅನ್ನು ಮೋಜಿಗಾಗಿ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಮಂಗಳೂರು, ಮಾರ್ಚ್‌, 01: ಸ್ವಿಮ್ಮಿಂಗ್ ಫೂಲ್ ಬಹುತೇಕರ ನೆಚ್ಚಿನ ತಾಣವಾಗಿರುತ್ತದೆ. ನೀರಿನಲ್ಲಿ ಆಟ ಆಡುತ್ತಾ ಸಮಯವನ್ನು ಸಂತೋಷದಿಂದ ಕಳೆಯುವುದಕ್ಕೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಇಸ್ರೇಲ್‌ನ ಉದ್ಯಮಿಯೊಬ್ಬ ಬಸ್ತಿಕೋಡಿಯಲ್ಲಿನ ತನ್ನ ಮನೆಯ ಸ್ವಿಮ್ಮಿಂಗ್ ಫೊಲ್ ಅನ್ನು ಜನರ ಮೋಜಿಗಾಗಿ ನೀಡಿ ವಿವಾದಕ್ಕೆ ಒಳಗಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಬಸ್ತಿಕೋಡಿಯಲ್ಲಿ ಈ ಸ್ವಿಮಿಂಗ್‌ ಫೂಲ್‌ ಇದೆ. ಇಲ್ಲಿ ಅಪಾಯಕಾರಿ ಸ್ವಂಟ್ ಮಾಡುತ್ತಾ, ಯುವಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಬಸ್ತಿಕೋಡಿ ನಿವಾಸಿ ಪ್ರಸ್ತುತ ಇಸ್ರೇಲ್‌ನಲ್ಲಿ ಉದ್ಯಮಿಯಾಗಿರುವ ಜಾನ್ ಹಣದಾಸೆಗೆ ಈಗ ಮನೆಯನ್ನೇ ರೆಸಾರ್ಟ್ ಮಾಡಿದ್ದಾರೆ. ಮನೆಯ ಸ್ವಿಮ್ಮಿಂಗ್ ಫೂಲ್ ಅನ್ನು ಸಾರ್ವಜನಿಕರಿಗೆ ಗಂಟೆಗೆ ನೂರು ರೂಪಾಯಿಗೆ ಕೊಡಲಾಗುತ್ತಿದೆ. ಹೀಗೆ ಉದ್ಯಮಿ ಜಾನ್ ಹಣದಾಸೆಗೆ ಯುವಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಾನಮತ್ತರಾಗಿ ಸ್ವಿಮ್ಮಿಂಗ್ ಫೂಲ್‌ಗೆ ಬರುವ ಯುವಕರು, ಗಂಟೆಗಳ ಕಾಲ ಸ್ಟಂಟ್ ಮಾಡುತ್ತಾ, ಅಪಾಯಕಾರಿಯಾಗಿ ಈಜಾಡುತ್ತಾ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ವಿಮ್ಮಿಂಗ್ ಫೂಲ್‌ನಲ್ಲಿ ಯಾವುದೇ ಸೆಕ್ಯೂರಿಟಿ, ಲೈಫ್ ಜಾಕೆಟ್ ಕೂಡ ಇಲ್ಲ. ಈ ಎಲ್ಲಾ ಪ್ರಕ್ರಿಯೆಗೆ ಪಂಚಾಯತ್‌ನಿಂದ ಅನುಮತಿಯನ್ನೂ ಪಡೆದಿಲ್ಲ.

ಈ ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡುವುದಕ್ಕೆ ಗಂಟೆಗೆ 100 ರೂಪಾಯಿ ಕೊಡಬೇಕು. ಮನೆ ಬಾಡಿಗೆಗೆ ಬೇಕಾದರೆ ದಿನಕ್ಕೆ 3,000 ರೂಪಾಯಿ ನೀಡಬೇಕು. ಮನೆಯ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮಕ್ಕಳು ಕೂಡ ಹಣ ನೀಡಿ ಈಜಾಡಬಹುದು‌‌. ಆದರೆ ಇಲ್ಲಿ ಮಕ್ಕಳ ಸುರಕ್ಷತೆಗೂ ಯಾವುದೇ ಆದ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚೆನೈತ್ತೋಡಿ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಳಿ ಸ್ಪಷ್ಟನೆ ಕೇಳಿದರೆ ಸ್ವಿಮ್ಮಿಂಗ್ ಫೂಲ್‌ಗೆ ಯಾವುದೇ ಅನುಮತಿ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇತ್ತ ಉದ್ಯಮಿ ಜಾನ್ ಕೂಡ ಯಾವುದೇ ದಾಖಲೆಗಳನ್ನು ಒದಗಿಸುತ್ತಿಲ್ಲ. ಸ್ಮಿಮ್ಮಿಂಗ್‌ ಫೂಲ್‌ನ ಅನಧೀಕೃತ ಬೋರ್ಡ್ ಹಾಕಿದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಅಪಾಯ ಎದುರಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇತ್ತೀಚೆಗಷ್ಟೇ ಯುವಕನೋರ್ವ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮುಳುಗಿ ಜೀವನ್ಮರಣ ಸ್ಥಿತಿಗೆ ತಲುಪಿದ್ದು, ಆತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಹೀಗಾಗಿ ಜೀವ ಹಾನಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕೇಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article