ಮನುಷ್ಯತ್ವವನ್ನೇ ನಾಚಿಸುವಂತ ಅಮಾನವೀಯ ಘಟನೆ ಉಡುಪಿ ಕೆಮ್ಮಣ್ಣಿನಲ್ಲಿ ನಡೆದಿದೆ. ಮೃತಪಟ್ಟ ಸಂಗಡಿಗನನ್ನೇ ಕಸದಂತೆ ಎಸೆದು ತೆರಳಿದ ವ್ಯಾಪಾರಿಗಳಿಬ್ಬರ ಹೀನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೊರ ಜಿಲ್ಲೆಯಿಂದ ಉಡುಪಿಯಲ್ಲಿ ಕಲ್ಲಂಗಡಿ ಮಾರುವ ವ್ಯಾಪಾರಿಗಳು ಮೂವರು ಒಂದೇ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಒಬ್ಬ ಮಾರ್ಗ ಮಧ್ಯೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದ್ರೆ ಈ ವೇಳೆ ಮಾನವೀಯತೆ ಮೆರೆದು ಆತನನ್ನು ಆಸ್ಪತ್ರೆಗೆ ಇಲ್ಲವೇ, ಆತನ ಮನೆಗೆ ಮೃತದೇಹವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕಿತ್ತು. ಆದರೆ ಉಳಿದ ಇಬ್ಬರು, ದಾರಿ ಮಧ್ಯೆಯೇ ಮೃತದೇಹವನ್ನು ಎಸೆದು ತೆರಳಿದ್ದಾರೆ. ಈ ಹೀನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.