ಬ್ರಹ್ಮಾವರ : ಮನಕಲಕುವ ಘಟನೆ - ಒಂದೇ ದಿನ ಸಂಗೀತ ಸ್ವರ ನಿಲ್ಲಿಸಿದ ಸಹೋದರರು
Friday, February 17, 2023
ಬ್ರಹ್ಮಾವರ : ಅಣ್ಣ ಹಾಗೂ ತಮ್ಮ ಒಂದೇ ದಿನ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ದೇವಾಡಿಗರಬೆಟ್ಟು ಎಂಬಲ್ಲಿ ಸಂಭವಿಸಿದೆ. ದೇವಾಡಿಗರಬೆಟ್ಟು ರಘುನಾಥ ದೇವಾಡಿಗ ಹಾಗೂ ಸುಮತಿ ದೇವಾಡಿಗ ಅವರ ಪುತ್ರರಾದ ರಾಘವೇಂದ್ರ ಯಾನೇ ಮೋನ (40) ಮತ್ತು ಗಣೇಶ್ ದೇವಾಡಿಗ (51) ಸಾವನ್ನಪ್ಪಿದವರು.
ಇಂದು ಬೆಳಗ್ಗೆ ರಾಘವೇಂದ್ರ ಯಾನೆ ಮೋನ ಇವರು ಅಲ್ಪಕಾಲದ ಅಸೌಖ್ಯದಿಂದ ಸಾವನ್ನಪ್ಪಿದ್ದು, ಸುದ್ದಿ ತಿಳಿದು ಮಧ್ಯಾಹ್ನ ಗಣೇಶ್ ದೇವಾಡಿಗ ಅವರೂ ಕೂಡ ಮೃತಮಟ್ಟಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಇಬ್ಬರೂ ಕೂಡ ವಾದ್ಯ ಸಂಗೀತದಲ್ಲಿ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದವರಾಗಿದ್ದು, ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ
ಮರುಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.