Cinema ; ತೆಲುಗಿನ ಹಿರಿಯ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ ನಿಧನ
Friday, February 3, 2023
ತೆಲುಗಿನ ಹಿರಿಯ ನಿರ್ದೇಶಕ, ನಟ ಕಾಶಿನಾಥುನಿ ವಿಶ್ವನಾಥ್ (92) ಅವರು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆ, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯೆದಲ್ಲಿ ನಿಧನ ಹೊಂದಿದರು. ಇವರ ನಿಧನ ಹಿನ್ನೆಲೆಯಲ್ಲಿ ಆಂಧ್ರ ಸಿಎಂ ಜಗನ್‌ಮೋಹನ್ ರೆಡ್ಡಿ, ನಟ ಚಿರಂಜೀವಿ, ಜೂನಿಯರ್ ಎನ್‌ಟಿಆರ್, ಬಾಲಿವುಡ್‌ನ ಅನಿಲ್ ಕಪೂರ್ ಸೇರಿದಂತೆ ಸಿನಿಮಾ ರಂಗದ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಆಂಧ್ರದ ಗುಂಟುರು ಜಿಲ್ಲೆಯ ರೇಪಲ್ಲೆ ಎಂಬ ಗ್ರಾಮದಲ್ಲಿ ಜನಿಸಿದದ ಕಾಶಿನಾಥುನಿ ವಿಶ್ವನಾಥ್ ಅವರು, ಮೊದಲು ವಿಜಯವಾಹಿನಿ ಸ್ಟುಡಿಯೋದಲ್ಲೇ ಸೌಂಡ್ ರೆಕಾರ್ಡ್‌ರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿಂದ ಅವರ ಸಿನಿಮಾ ಆರಂಭ ಮಾಡಿದರು. ಮುಂದೆ ಸಿನಿ ರಂಗದಲ್ಲಿ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡರು.