
UDUPI ; ಬಾರ್ ಮಾಲೀಕನಿಗೆ ಹಲ್ಲೆ ಮಾಡಿದ ದುಷ್ಕರ್ಮಿಗಳು ; video ವೈರಲ್
Saturday, February 4, 2023
ಬಾರ್‌ನಲ್ಲಿ ನಡೆಯುತ್ತಿದ್ದ ವಾಗ್ವದ ಬಿಡಿಸಲು ಹೋದ ಬಾರ್ ಮಾಲಿಕನಿಗೆ ದುಷ್ಕರ್ಮಿಗಳು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿಯ ಸಾಲಿಗ್ರಾಮದಲ್ಲಿ ನಡೆದಿದೆ.
ರೋಹಿತ್, ರಂಜಿತ್, ಸಚಿನ್ ಶಶಾಂಕ್, ವಿಘ್ನೇಶ್ ಬಂಧಿತರು. ಇಲ್ಲಿನ ನರ್ತಕಿ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಸೈನಿಕನೋರ್ವ ತನ್ನ ಸ್ನೇಹಿತರಿಗಾಗಿ ಪಾರ್ಟಿ ಆಯೋಜಸಿದ್ದರು. ಈ ವೇಳೆ ವಾಗ್ವಾದ ನಡೆಯುತ್ತಿದ್ದಾಗ, ಬಿಡಿಸಲು ಹೋದ ಬಾರ್ ಮಾಲಕನಿಗೆ ಏಳು ಜನರ ತಂಡ ಹಲ್ಲೆ ಮಾಡಿದೆ.
ಬಾರ್ ಮಾಲಕನನ್ನು ನೆಲಕ್ಕೆ ಹಾಕಿ ತುಳಿದಿದ್ದಾರೆ. ಘಟನಾವಳಿಯ ಸಿಸಿ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಘಟನೆ ಸಂಬಂಧಿಸಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ.