
UDUPI : ಮುತಾಲಿಕ್ ಸ್ಪರ್ಧೆಗೆ ಶ್ರೀರಾಮ ಸೇನೆಯಿಂದಲೇ ವಿರೋಧ..!!start
Friday, February 10, 2023
ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ ನಡೆಸುವ ಬಗ್ಗೆ ಶ್ರೀರಾಮ ಸೇನೆ ಸಂಘಟನೆಯೊಳಗೆ ಅಸಮಾಧಾನ ಬುಗಿಲೆದ್ದಿದೆ. ಶ್ರೀರಾಮಸೇನೆ ಮಂಗಳೂರು ವಿಭಾಗದಿಂದ ಮುತಾಲಿಕ್ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದ್ದು,ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ್ ಭಟ್ ರಿಂದ ಒತ್ತಾಯಿಸಿದ್ದಾರೆ.
ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ.ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ?. ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲಮಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರೋಧಿಗಳು ಮುತಾಲಿಕ್ ರನ್ನು ಬಲಿಕೊಡುತ್ತಿದ್ದಾರೆ. ಬಿಜೆಪಿ ಸಂಘ ಪರಿವಾರದ ಜೊತೆ ಮಾತನಾಡಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸಬೇಕು. ಪ್ರಮೋದ್ ಮುತಾಲಿಕ್ ರಿಗೆ ನಮ್ಮ ಬೆಂಬಲ ಇಲ್ಲ. ಶ್ರೀರಾಮ ಸೇನ ಸಂಘಟನೆಯಿಂದ ಪ್ರತ್ಯೇಕಗೊಂಡು ಬೇಕಾದರೆ ಸ್ಪರ್ದಿಸಲಿ. ಪ್ರಮೋದ್ ಮುತಾಲಿಕ್ ನಮ್ಮ ಗುರುಗಳು ಅವರು ಸೋಲುವುದನ್ನು ನಾವು ಬಯಸುವುದಿಲ್ಲ
ಫೆಬ್ರವರಿ 20ರಂದು ಈ ಕುರಿತು ಚರ್ಚಿಸಲು ಕಾರ್ಯಕರ್ತರ ಬೈಠಕ್ ಕರೆಯಲಾಗಿದೆ.
ಇನ್ನೂ ಕಾಲ ಮಿಂಚಿಲ್ಲ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮೋಹನ್ ಭಟ್ ಒತ್ತಾಯಿಸಿದ್ದಾರೆ.
ಮುತಾಲಿಕ್ ನನಗೆ ಇನ್ನು ಮುಂದೆ ರಾಜಕೀಯ ಬೇಡ ಎನ್ನುತ್ತಿದ್ದರು. ಕೇವಲ ಸಂಘಟನೆ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದರು. ಈ ಬಾರಿ ವಿಧಾನಸೌಧ ಮೆಟ್ಟಿಲು ಏರಬೇಕು ಅನ್ನೋದು ನಮಗೂ ಆಸೆ ಇದೆ. ಆದರೆ ಕಾರ್ಕಳದಿಂದ ಸ್ಪರ್ಧಿಸಿ ಸಂಘಟನೆಯಲ್ಲಿ ಗೊಂದಲ ಉಂಟು ಮಾಡಿದ್ದಾರೆ. 20 ವರ್ಷ ಕಷ್ಟಪಟ್ಟು ಸಂಘಟನೆ ಕಟ್ಟಿದ್ದೇವೆ. ಮುತಾಲಿಕ್ ಸ್ಪರ್ಧೆಯಿಂದ ಕಾರ್ಯಕರ್ತರ ಒಳಗೆ ಗೊಂದಲ ಉಂಟಾಗಿದೆ. ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎಂದು ನಂಬಿದ್ದೇವೆ.ಬಕಾರ್ಕಳದಲ್ಲಿ ಮುತಾಲಿಕ್ ನಿಂತು ಕಾಂಗ್ರೆಸ್ಸಿಗೆ ಲಾಭ ಆಗೋದು ಬೇಡ ಬಿಜೆಪಿ ಸಂಘ ಪರಿವಾರ ಇವರಿಗೆ ಸ್ಥಾನಮಾನ ಕೊಡಲು ಸಿದ್ಧವಿದೆ.ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕಿತ್ತು. ಕಾರ್ಯಕರ್ತರ ಜೊತೆ ಬೈಟಕ್ ಮಾಡದೆ ನಿರ್ಧಾರ ಕೈಗೊಂಡಿದ್ದಾರೆ ಅಂತ ಹೇಳಿದ್ದಾರೆ..