ಮದುವೆಯಾಗಲಿದ್ದ ಯುವತಿಯನ್ನೇ ಅತ್ಯಾಚಾರ ಮಾಡಿ ಕೊಂದ ಯುವಕ!
Monday, February 20, 2023
ಜಾಲ್ನ, : ವ್ಯಕ್ತಿಯೊಬ್ಬ ತಾನು ಮದುವೆಯಾಗಬೇಕಿದ್ದ ಯುವತಿಯನ್ನೇ ಆತ್ಯಾಚಾರ ಮಾಡಿ ಕೊಂದಿರುವ ಘಟನೆ ಮಹಾರಾಷ್ಟ್ರದ ಜಾಲದಲ್ಲಿ ನಡೆದಿದೆ.
ಆರೋಪಿ 24 ವರ್ಷದವ ನಾಗಿದ್ದು, ಬುಲ್ದಾನಾ ಜಿಲ್ಲೆಯ ವರೂದ್ ನಿವಾಸಿ ಹಾಗೂ ಕೊಲೆಗೀಡಾದ 17ರ ಹರೆಯದ ಯುವತಿ ಬೆಲೂರಾ ನಿವಾಸಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯರು ನಿರ್ಧರಿಸಿ ದಂತೆ ಇವರ ವಿವಾಹವು ಮಾ. 17ರಂದು ನಡೆಯಲಿತ್ತು. ಈ ನಡುವೆ ಆರೋಪಿಯು ಯುವತಿಯ ಮನೆಗೆ ಬಂದು ಆಕೆಯ ಮೇಲೆ ಅತ್ಯಾಚಾರ ಎಸಗಿ ಗಂಟಲು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಯಾಕಾಗಿ ಈ ಕೃತ್ಯ ಎಸಗಿದ್ದಾನೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.