ಡಿಕೆ ರವಿ ಮಾನಸಿಕ ಅಸ್ವಸ್ಥ ಎಂದರೆ ನನಗೆ ನೋವಾಗುತ್ತೆ, ಅವಮಾನ ಮಾಡ್ಬೇಡಿ; ಕುಸುಮಾ ಪರೋಕ್ಷ ವಾರ್ನಿಂಗ್
Sunday, February 19, 2023
ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಎಎಸ್-ಐಪಿಎಸ್ (Lady Officers) ನಡುವೆ ಶುರುವಾಗಿರುವ ವಾರ್ ಮತ್ತಷ್ಟು ಹೆಚ್ಚಾಗುತ್ತಿದೆ. ಇಬ್ಬರ ಟಾಕ್ ವಾರ್ ನಡುವೆ ಡಿಕೆ ರವಿ ಅವರ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ವಿರುದ್ಧ ಐಪಿಎಸ್ ಅಧಿಕಾರಿ ಡಿ.ರೂಪಾ (IPS Officer D. Roopa) 20 ಆರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ನಡುವೆ ಡಿಕೆ ರವಿ ಅವರ ಸಾವಿನ ಬಗ್ಗೆ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಡಿಕೆ ರವಿ (DK Ravi) ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆನ್ನು ನೀಡಿದ್ದಾರೆ. ಈ ವೇಳೆ ರವಿ ಅವರಿಗೆ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ. ಈ ರೀತಿ ಹೇಳಿಕೆಗಳನ್ನು ನೀಡಿ ಅವರಿಗೆ ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.