ಮಂಗಳೂರಿನ ಚಿನ್ನಾಭರಣದ ಅಂಗಡಿಯಲ್ಲಿ MURDER !
Friday, February 3, 2023
ಮಂಗಳೂರು: ನಗರದ ಹಂಪನಕಟ್ಟೆ ಯ ಚಿನ್ನಾಭರಣವೊಂದರ ಅಂಗಡಿಯಲ್ಲಿ ಶುಕ್ರವಾರ ಸಂಜೆ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಮರ್ಡರ್ ಮಾಡಲಾಗಿದೆ.
ರಾಘವ ಆಚಾರಿ ಕೊಲೆಯಾದ ವ್ಯಕ್ತಿ. ಇವರು ನಗರದ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರ್ಸ್‌ನಲ್ಲಿ ಕೆಲಸಕ್ಕಿದ್ದರು. ಅತ್ತಾವರ ಮೂಲದ ಇವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ವ್ಯಕ್ತಿಯೊಬ್ಬ ಅಂಗಡಿಗೆ ಪ್ರವೇಶಿಸಿ ರಾಘವ ಆಚಾರಿಗೆ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗಿಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಕೊಲೆ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.