
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಮೂಡುಬಿದಿರೆಯ ಅಬ್ದುಲ್ ನಜೀರ್ ರಾಜ್ಯಪಾಲರಾಗಿ ನೇಮಕ
Sunday, February 12, 2023
ಹೊಸದಿಲ್ಲಿ : ಮೂಲತಃ ಮೂಡುಬಿದಿರೆ ಸಮೀಪದ ಬೆಳುವಾಯಿಯವರಾದ ಸುಪ್ರೀ ಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಎಸ್. ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ನೇಮಿಸಿದ್ದಾರೆ. ಎಸ್. ಅಬ್ದುಲ್ ನಜೀರ್ ಅವರು ಆಂಧ್ರದ ರಾಜ್ಯಪಾಲರಾಗಿದ್ದಾರೆ. ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥುರ್ ರಾಜೀನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ದೌಪದಿ ಮುರ್ಮು 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರುಗಳ ನೇಮಕಾತಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ನಿರ್ಗಮಿತ ರಾಜ್ಯಪಾಲ ಭಗತ್ ಸಿಂಗ್ ಸ್ಥಾನವನ್ನು ಮಾಜಿ ಕೇಂದ್ರ ಸಚಿವ ಹಾಗೂ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ತುಂಬಿದ್ದಾರೆ. ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ. ರಾಧಾಕೃಷ್ಣನ್ ನೇಮಕವಾಗಿದ್ದಾರೆ.
ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಡಿ. ಮಿಶ್ರಾ ಅವರನ್ನು ಲಡಾಖ್‌ಗೆ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಅರುಣಾಚಲ ಪ್ರದೇಶಕ್ಕೆ ಹೊಸ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕವಾಗಿದ್ದಾರೆ. ರಾಷ್ಟ್ರಪತಿ ನೇಮಕವಾದ 12 ರಾಜ್ಯಪಾಲರು
ಅರುಣಾಚಲಪ್ರದೇಶ ರಾಜ್ಯಪಾಲ : ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕ
ಸಿಕ್ಕಿಂ ರಾಜ್ಯಪಾಲ : ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಾರ್ಖಂಡ್ ರಾಜ್ಯಪಾಲ : ಸಿ.ಪಿ. ರಾಧಾಕೃಷ್ಣನ್ ಹಿಮಾಚಲಪ್ರದೇಶ ರಾಜ್ಯಪಾಲ: ಶಿವಪ್ರತಾಪ್ ಶುಕ್ಲಾ ಛತ್ತೀಸ್‌ಗಡ ರಾಜ್ಯಪಾಲ: ಬಿಸ್ವ ಭೂಸನ್ ಹರಿಚಂದನ್ ಮಣಿಪುರ ರಾಜ್ಯಪಾಲ: ಅನುಸೂಯ ಊಕ್ಕೆ ಮೇಘಾಲಯ ರಾಜ್ಯಪಾಲ: ಫಾಗು ಚೌಹಾಣ್ ಬಿಹಾರ ರಾಜ್ಯಪಾಲ: ರಾಜೇಂದ್ರ ವಿಶ್ವನಾಥ್ ಅರ್ಲೇಕ ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್
ಅರುಣಾಚಲ ಕೇಂದ್ರಾಡಳಿತದ ಲೆಫ್ಟಿನೆಂಟ್ ಗವರ್ನರ್:
ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ