-->

ಆಂಧ್ರದ ನೂತನ ರಾಜ್ಯಪಾಲರ ಆಯ್ಕೆ ಬಗ್ಗೆ ಕಿಡಿಕಾರಿದ ಟಿಎಂಸಿ ಸಂಸದೆ

ಆಂಧ್ರದ ನೂತನ ರಾಜ್ಯಪಾಲರ ಆಯ್ಕೆ ಬಗ್ಗೆ ಕಿಡಿಕಾರಿದ ಟಿಎಂಸಿ ಸಂಸದೆ

ಕೋಲ್ಕತ್ತಾ : ಆಂಧ್ರಪ್ರದೇಶದ ನೂತನ ಗವರ್ನರ್ ಆಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್ ಅವರ ನೇಮಕವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ.

ಎರಡು ತಿಂಗಳೊಳಗೆ ಮತ್ತೊಬ್ಬ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಅವರ ನಿವೃತ್ತಿಯ ನಂತರ ರಾಜ್ಯಪಾಲರನ್ನು ನೇಮಿಸಲಾಗಿದೆ. ಬಹುಮತದ ಸರ್ಕಾರವು ಗ್ರಹಿಕೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ, ಅದನ್ನು ಒಪ್ಪಿಕೊಳ್ಳಲು ಎಷ್ಟು ನಾಚಿಕೆ ಇಲ್ಲದವರು ನೀವು? ” ಎಂದು ಮಹುವಾ ಮೊಯಿತ್ರಾ ಟ್ವಿಟ್ ಮಾಡಿದ್ದಾರೆ.

ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ನಿವೃತ್ತರಾದ 30 ದಿನಗಳ ಒಳಗೆ ಅವರ ನೇಮಕಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದ ಭುಗಿಲೆದ್ದಿದೆ. ನವೆಂಬರ್ 2019 ರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಐದು ನ್ಯಾಯಾಧೀಶರ ಪೀಠದ ಭಾಗವಾಗಿದ್ದರು. ಅಲ್ಲದೇ 2016 ರಲ್ಲಿ ನೋಟು ಅಮಾನ್ಯಕರಣದ ಕ್ರಮವನ್ನು ಎತ್ತಿಹಿಡಿದ ಪೀಠದ ನೇತೃತ್ವ ವಹಿಸಿದ್ದರು. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಪೀಠದಲ್ಲಿ ಅಬ್ದುಲ್ ನಜೀರ್ ಇದ್ದರು. ಆ ಐತಿಹಾಸಿಕ ತೀರ್ಪಿನಲ್ಲಿ ನ್ಯಾಯಪೀಠವು ತ್ರಿವಳಿ ತಲಾಖ್ ಅನ್ನು ಅಸಿಂಧುಗೊಳಿಸಿತ್ತು.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿಯವರಾದ ಅಬ್ದುಲ್ ನಜೀರ್ ಕಳೆದ ಜನವರಿ 14 ರಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99