
ಲೇಖಕಿ, ತಾರೆ ಜಮೀನ್ ಪರ್' ನಟಿ ಲಲಿತಾ ಲಕ್ಷ್ಮಿ ನಿಧನ
Tuesday, February 14, 2023
ಮುಂಬೈ: ಲೇಖಕಿ, ತಾರೆ ಜಮೀನ್ ಪರ್ ಸಿನಿಮಾದಲ್ಲಿ ಆರ್ಟ್ಸ್ ಟೀಚರ್ ಆಗಿ ನಟಿಸಿದ್ದ ನಟಿ ಲಲಿತಾ ಲಕ್ಷ್ಮಿ (90 ವರ್ಷ) ಸೋಮವಾರ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಾ ನಮ್ಮ ಅವರು ನಿನ್ನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮುಂಬೈನ ಜಹಾಂಗೀರ್ ನಿಕೋಲ್ಸನ್ ಆರ್ಟ್ ಫೌಂಡೇಷನ್ ದೃಢಪಡಿಸಿದ್ದು, “ಸೂಕ್ಷ್ಮ ಸಂವೇದನೆಯ ಕಲಾವಿದೆ, ಕ್ಲಾಸಿಕಲ್ ಡಾನ್ಸ್‌ನಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರ ಅಗಲಿಕೆಯ ಸುದ್ದಿ ದುಃಖ ತಂದಿದೆ” ಎಂದು ಸಂಸ್ಥೆ ಸಂತಾಪ ಸೂಚಿಸಿದೆ.
ಲಲಿತಾ ಲಕ್ಷ್ಮಿ ಅವರು ಬಾಲಿವುಡ್‌ನ ಖ್ಯಾತ ನಟ ಗುರುದತ್ ಅವರ ಸಹೋದರಿ ಆಗಿದ್ದಾರೆ.