ನನ್ನ ಗಂಡನಿಗೆ ಅಕ್ರಮ ಸಂಬಂಧ ಇದೆ: ತಾಯಿ ಸಾಯಲು ಇವನೇ ಕಾರಣ-ರಾಖಿ ಸಾವಂತ್
Wednesday, February 8, 2023
ಮುಂಬೈ: ನನ್ನ ತಾಯಿಯ ಸಾವಿಗೆ ಕಾರಣ ನನ್ನ ಪತಿ ನಾನು ಬಿಗ್ ಬಾಸ್ ಷೋಗೆ ಹೋಗುವ ಮುನ್ನ ಪತಿ ಆದಿಲ್‌ಗೆ 10 ಲಕ್ಷ ರೂಪಾಯಿ ಹಣ ಕೊಟ್ಟಿದ್ದೆ. ನನ್ನ ತಾಯಿಯ ಆಸ್ಪತ್ರೆ ಖರ್ಚಿಗೆ ಈ ಹಣ ಬಳಸುವಂತೆ ಹೇಳಿದ್ದೆ. ಆದರೆ ನನ್ನ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಗೆ ನಿಜವಾಗಿಯೂ ಹಣದ ಅವಶ್ಯಕತೆ ಇತ್ತು. ಆಗ ಪತಿ ಆದಿಲ್ ಆಸ್ಪತ್ರೆ ಖರ್ಚು ನೋಡಿಕೊಂಡಿಲ್ಲ. ಇದೇ ಕಾರಣದಿಂದ ನನ್ನ ತಾಯಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ ಎಂದು ನಟಿ ರಾಖಿ ಸಾವಂತ್ ಆರೋಪಿಸಿದ್ದಾರೆ.
ಈ ಬಗ್ಗೆ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ನಿ ರಾಖಿ ಜೊತೆ ಮಾತನಾಡಲು ಆಕೆಯ ಮನೆಯ ಬರುತ್ತಿರುವಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ತನ್ನಿಂದ ಬೇರ್ಪಟ್ಟು ಗೆಳತಿ ತನು ಜೊತೆ ವಾಸಿಸುತ್ತಿದ್ದೇನೆ ಎಂದು ಆದಿಲ್ ಖಾನ್ ದುರಾನಿ ಹೇಳಿದ್ದಾಗಿ ಕೂಡ ನಟಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಕೊನೆಗೂ ಆದಿಲ್ ತನ್ನ ಗೆಳತಿ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ರಾಖಿ ಮಾಧ್ಯಮಗಳಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಅವರು ಆದಿಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿಲ್ ತನ್ನನ್ನು ನಿಂದಿಸುವ ಮೂಲಕ ಬಾಲಿವುಡ್‌ನಲ್ಲಿ ಸ್ಟಾರ್ ಆಗಲು ಹೊರಟಿದ್ದಾರೆ. ತನ್ನ ಬಳಿ ಇದ್ದ ಎಲ್ಲ ಹಣವನ್ನು ತೆಗೆದುಕೊಂಡಿದ್ದಾರೆ. ಆದಿಲ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ರಾಖಿ ತಿಳಿಸಿದ್ದಾರೆ.
ಮೈಸೂರಿನ ಉದ್ಯಮಿಯಾದ ಆದಿಲ್ ಖಾನ್ ಅವರನ್ನು ರಾಖಿ ಸಾವಂತ್ ಇತ್ತೀಚೆಗಷ್ಟೇ ಮದುವೆ ಆಗಿದ್ದರು. ಈಗ ಅವರಿಂದ ಬೇರೆ ಆಗುವುದಾಗಿ ರಾಖಿ ಸಾವಂತ್ ನಿರ್ಧರಿಸಿದ್ದಾರೆ.