ಶ್ರದ್ಧಾ ದೇಹದ ಮೂಳೆಗಳನ್ನು ಗೊಂಡರ್‌ನಲ್ಲಿ ಪುಡಿ ಮಾಡಿ ಎಸೆದಿದ್ದ ಅಫ್ಲಾಬ್ - ಭಯಾನಕ ಅಂಶ ಬೆಳಕಿಗೆ
Wednesday, February 8, 2023
ನವದೆಹಲಿ : ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭ್ಯವಾಗಿದೆ. ತನ್ನ ಪ್ರೇಯಸಿ ಶ್ರದ್ಧಾ ವಾಕರ್‌ಳನ್ನು ಭೀಕರವಾಗಿ ಹತ್ಯೆಗೈದು ಬಳಿಕ 35 ತುಂಡುಗಳಾಗಿ ಕತ್ತರಿಸಿದ್ದ ಅಫ್ಲಾಬ್ ಪೂನಾವಾಲಾ, ಸಾಕ್ಷ್ಯ ನಾಶದ ಉದ್ದೇಶದಿಂದ ಆಕೆಯ ದೇಹದ ಮೂಳೆಗಳನ್ನು ಗೊಂಡರ್‌ನಲ್ಲಿ ಪುಡಿ ಮಾಡಿ ಬಳಿಕ ಎಸೆದಿದ್ದ ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಹತ್ಯೆ ಪ್ರಕರಣದ ಕುರಿತು ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಇಬ್ಬರ ಪ್ರೇಮ ಸಂಬಂಧ, ಅದು ಆರಂಭವಾದ ಪರಿ, ಇಬ್ಬರ ನಡುವಿನ ಗಲಾಟೆ, ಬೇರೆ ಯುವತಿಯರ ಜೊತೆ ಅಫ್ಲಾಬ್ ಸಂಬಂಧ, ಆತನ ಗಲಾಟೆ ಸ್ವಭಾವ, ಆತನಿಂದ ಶ್ರದ್ಧಾ ಎದುರಿಸುತ್ತಿದ್ದ ಜೀವ ಬೆದರಿಕೆ, ಇಡೀ ಹತ್ಯೆಯ ಘಟನಾವಳಿಗಳ ಕುರಿತು 6629 ಪುಟಗಳಲ್ಲಿ
ವಿಸ್ತ್ರತವಾಗಿ ಮಾಹಿತಿ ನೀಡಲಾಗಿದೆ.
ಶ್ರದ್ಧಾ ಮತ್ತು ಅಫ್ತಾಬ್ ನಡುವೆ 2018-19ರಲ್ಲಿ ಬಂಬಲ್ ಡೇಟಿಂಗ್ ಆ್ಯಪ್ ಮೂಲಕ ನಂಟು ಬೆಳೆದಿತ್ತು. 2019ರಲ್ಲಿ ಮೊದಲ ಬಾರಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು. ಇದಾದ ಬಳಿಕ ಶ್ರದ್ಧಾ ಬಳಿ ಗರ್ಭಧಾರಣೆ ಪರೀಕ್ಷೆ ಕಿಟ್ ನೋಡಿ ಸಂಶಯಗೊಂಡ ಪೋಷಕರು ಪ್ರಶ್ನಿಸಿದಾಗ, ಆಕೆ ಅಫ್ಲಾಬ್ ಜೊತೆಗಿನ ಪ್ರೀತಿ ವಿಷಯ ಬಹಿರಂಗಪಡಿಸಿದ್ದಳು. ಆದರೆ, ಇದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಶ್ರದ್ಧಾಳನ್ನು ಅಫ್ತಾಬ್ ಮುಂಬೈನಲ್ಲೇ ಬಾಡಿಗೆ ಮನೆಗೆ ಕರೆದೊಯ್ದು ಇರಿಸಿಕೊಂಡಿದ್ದ.
ಬಳಿಕ ಇಬ್ಬರೂ ದಿಲ್ಲಿಗೆ ತೆರಳಿದ್ದರು. ಆದರೆ ಕೆಲ
ಸಮಯದ ಬಳಿಕ ಅಫ್ಲಾಬ್ ಬೇರೆ ಯುವತಿಯೊಂದಿಗೆ
ನಂಟು ಹೊಂದಿರುವುದು ಶ್ರದ್ಧಾಗೆ ತಿಳಿದು ಇಬ್ಬರ
ನಡುವೆ ಜಗಳ ಆರಂಭವಾಗಿತ್ತು. ಕೊನೆಗೆ ಆಕೆಯನ್ನು
ತನ್ನ ಹಾದಿಯಿಂದ ದೂರ ಮಾಡಲು ಅಫ್ಲಾಬ್
ಮುಂದಾಗಿದ್ದ.
ಅದರಂತೆ 2022ರ ಮೇ 18ರಂದು ಕತ್ತು ಹಿಸುಕಿ ಆಕೆಯನ್ನು ಅಫ್ತಾಬ್ ಹತ್ಯೆ ಮಾಡಿದ್ದ. ಬಳಿಕ ಹರಿತ
ಆಯುಧ ಬಳಸಿ ಆಕೆಯ ಎರಡೂ ಕೈಗಳನ್ನು ತಲಾ 3 ತುಂಡುಗಳಂತೆ, ಎರಡೂ ಕಾಲುಗಳನ್ನು ತಲಾ 3 ತುಂಡುಗಳಂತೆ, ತಲೆಯನ್ನು ಒಂದು ಭಾಗ, ತೊಡೆ ಭಾಗವನ್ನು 2 ಭಾಗ ಹೀಗೆ ಇಡೀ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಎನ್ನಲಾಗಿದೆ.