-->

ಮುಂಡೂರು ದೇವಸ್ಥಾನದ ಜಾತ್ರೆಯಲ್ಲಿ ಪಟಾಕಿ ಅವಘಡ: ಓರ್ವ ವೃದ್ಧ ಸಹಿತ ಮೂವರು ಬಾಲಕರಿಗೆ ಸುಟ್ಟ ಗಾಯ: ಆಡಳಿತ ಮಂಡಳಿಯ ನಿರ್ಲಕ್ಷ್ಯ

ಮುಂಡೂರು ದೇವಸ್ಥಾನದ ಜಾತ್ರೆಯಲ್ಲಿ ಪಟಾಕಿ ಅವಘಡ: ಓರ್ವ ವೃದ್ಧ ಸಹಿತ ಮೂವರು ಬಾಲಕರಿಗೆ ಸುಟ್ಟ ಗಾಯ: ಆಡಳಿತ ಮಂಡಳಿಯ ನಿರ್ಲಕ್ಷ್ಯ

ಕಾರ್ಕಳ: ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಗೊಳಪ್ಪಟ್ಟ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.18ರ ಶನಿವಾರ ರಾತ್ರಿ ನಡೆದ ಬ್ರಹ್ಮರಥೋತ್ಸವದ ಸಂದರ್ಭ ಸಿಡಿಮದ್ದು ಪ್ರದರ್ಶನದ ವೇಳೆ ಪಟಾಕಿ ರಾಶಿಗೆ ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಓರ್ವ ವೃದ್ಧ ಸಹಿತ ಮೂವರು ಬಾಲಕರಿಗೆ ಬೆಂಕಿ ತಗುಲಿ ಸುಟ್ಟಗಾಯಗಳಾದ ಘಟನೆ ಸಂಭವಿಸಿದೆ.

ಈ ದುರ್ಘಟನೆ ನಡೆದು ಅರ್ಧ ತಾಸು ಕಳೆದರೂ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ದೇವಸ್ಥಾನದ ಆಡಳಿತ ಮಂಡಳಿಯವರು ಯಾವುದೇ ವಾಹನದ ವ್ಯವಸ್ಥೆ ಮಾಡದೇ, ಕೊನೆಗೆ ಗಾಯಾಳು ಬಾಲಕರ ಮನೆ ಮಂದಿಯೇ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ್ದು, ಆಡಳಿತ ಮಂಡಳಿಯ ವರ್ತನೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಬೃಹತ್ ಜನಸಂಖ್ಯೆ ಸೇರುವ ಜಾತ್ರಾ ಸಮಯದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕೊಠಡಿ ಅಥವಾ ಅಂಬುಲೆನ್ಸ್ ವ್ಯವಸ್ಥೆ ಕೂಡ ಮಾಡದಿರುವುದು ಆಡಳಿತ ಮಂಡಳಿಯ ಬೇಜವಾಬ್ದಾರಿಯೇ ಕಾರಣವಾಗಿದೆ.ಇದಲ್ಲದೇ ಸಿಡಿಮದ್ದು ಪ್ರದರ್ಶನದ ವೇಳೆ ಅಗ್ನಿಶಾಮಕ ದಳವನ್ನು ಸನ್ನದ್ದ ಸ್ಥಿತಿಯಲ್ಲಿರಿಸಬೇಕಿತ್ತು ಆದರೆ ದೇವಸ್ಥಾನದ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೊಟೇಲ್ ತ್ಯಾಜ್ಯ ಗುಂಡಿಗೆ ಬಿದ್ದ ಮಹಿಳೆಯರು!

ಸಿಡಿಮದ್ದು ಪ್ರದರ್ಶಿಸುವ ಸಂದರ್ಭದಲ್ಲಿ ಏಕಾಎಕಿ ಬೆಂಕಿ ದುರ್ಘಟನೆ ಸಂಭವಿಸಿದಾಗ ಗಾಬರಿಗೊಂಡ ಮಹಿಳೆಯರು ದಿಕ್ಕಾಪಾಲಾಗಿ ಓಡುವ ಸಂದರ್ಭ

ಪೇಟೆಯ ಮಧ್ಯಭಾಗದಲ್ಲಿ ದುರ್ನಾತ ಬೀರುವ ಹೊಟೇಲ್ ತ್ಯಾಜ್ಯ ನೀರಿನ ಬೃಹತ್ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಪೇಟೆಯ ಮಧ್ಯೆ ಕೊಳಚೆ ಗುಂಡಿ ಇದ್ದು ಅದಕ್ಕೆ ಹಳೇ ತಗಡು ಶೀಟುಗಳನ್ನು ಮುಚ್ಚಲಾಗಿದ್ದು, ಅಪಾಯಕಾರಿ ಕೊಳಚೆ ಗುಂಡಿಯನ್ನು ಮುಚ್ಚುವ ಕುರಿತು ಸ್ಥಳೀಯ ಆಡಳಿತವಾಗಲಿ, ದೇವಸ್ಥಾನದ ಆಡಳಿತ ಮಂಡಳಿಯಾಗಲಿ ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್‌ಗೆ ಹಲವಾರು ಬಾರಿ ತಿಳಿಸಿದರೂ, ಜನಪ್ರತಿನಿಧಿಗಳು ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ದೇವಸ್ಥಾನದ
ವತಿಯಿಂದ ಭರಿಸಲಾಗುವುದು: ರವೀಂದ್ರ ಶೆಟ್ಟಿ
ಪಟಾಕಿಗೆ ಬೆಂಕಿ ಹತ್ತಿ ಮಕ್ಕಳು ಹಾಗೂ ಹಿರಿಯರಿಗೆ ಸಣ್ಣಪ್ರಮಾಣದ ಗಾಯಗಳಾಗಿರುವ ದುರ್ಘಟನೆ ಸಂಭವಿಸಿರುವುದು ವಿಷಾದನೀಯ.ಗಾಯಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಅಲ್ಲದೇ ಚಿಕಿತ್ಸಾ ವೆಚ್ಚವನ್ನು ದೇವಸ್ಥಾನದ ವತಿಯಿಂದ ಭರಿಸಲಾಗುವುದು ಅಲ್ಲದೇ ಇನ್ನುಮುಂದೆ ಇಂತಹ ದುರ್ಘಟನೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99