UDUPI : ಅಡಿಕೆಯನ್ನು ಜಗಿದು ಉಗಿಯೋದು ಬಿಟ್ರೆ ಬೇರೆ ಪರ್ಯಾಯ ಉಪಯೋಗ ಇಲ್ಲ ; ಗೃಹ ಸಚಿವ ಅರಗ
Friday, January 13, 2023
ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬಾರದು ಅಂತ ವಿಧಾನಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಕರಾವಳಿ ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣ ಆಗಿದೆ.
ಇದೇ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ, ಗೃಹ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಡಿಕೆ ಬೆಳೆಗಾರರ ಜೊತೆಗೆ ನಾನು ಇದ್ದೇನೆ. ಸರ್ಕಾರ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡಿಸುವ ಅವಶ್ಯಕತೆ ಇಲ್ಲ ಅಂತ ಹೇಳಿದ್ದು ಅಂತ ಹೇಳಿದ್ದಾರೆ.
ಪರಂಪರಾಗತವಾಗಿ ಬೆಳೆಯುವ ಕರಾವಳಿ ಮಲೆನಾಡಿನಲ್ಲಿ ನಾವು ಮಾತ್ರ ಅಡಿಕೆ ಬೆಳೆಯುತ್ತೇವೆ. ಈಗ ಜಾಗತಿಕ ಬ್ಯಾಂಕುಗಳಲ್ಲಿ ಎಣ್ಣೆ ಕಾಳು ಬೆಳೆಯುತ್ತೇವೆ, ಆಹಾರ ಬೆಳೆಯುತ್ತೇವೆ ಅಂತ ಸಾಲ ತಂದು. ಡ್ಯಾಂ ಕಟ್ಟಿ ಆ ಭಾಗದಲ್ಲೂ ಅಡಿಕೆ ಬೆಳೆಯುತ್ತಿದ್ದಾರೆ. ವರ್ಷಕ್ಕೆ ಒಂದು ಕೋಟಿ ಅಡಿಕೆ ಸಸಿ ಸೇಲ್ ಆಗುತ್ತೆ.
ಆಂದ್ರಪ್ರದೇಶದಲ್ಲಿ ಎರಡು ಸಾವಿರ ಎಕರೆಯಲ್ಲಿ ಈಗಾಗಲೇ ಫಸಲು ಬರುದಕ್ಕೆ ಶುರುವಾಗಿದೆ. ಹಾಗಾದ್ರೆ ಅಡಿಕೆ ರೇಟ್ ಎಷ್ಟು ದಿನ ನಿಲ್ಲಬಹುದು. ಅಡಿಕೆಯನ್ನು ಜಗಿದು ಉಗಿಯೋದು ಬಿಟ್ರೆ ಬೇರೆ ಯಾವುದೇ ಪರ್ಯಾಯ ಉಪಯೋಗಕ್ಕೆ ಬಳಸಲು ಆಗುತ್ತಿಲ್ಲಅಡಿಕೆಗೆ ಬಂದ ರೇಟ್ ಅಡಿಕೆಗೆ ಶಾಪ ಆಗಿದೆ.
ಕಾಂಗ್ರೆಸ್ ಸರ್ಕಾರ ಕಾಲದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆಯಲ್ಲಿ ಕ್ಯಾನ್ಸರ್ ಅಂಶ ಇದೆ ಅಂತ ಆಗಿದೆ ಅದನ್ನು ತೆಗೆಯಬೇಕಾಗಿದೆ, ಹೀಗಾಗಿ ಅಡಿಕೆ ಗೊಂದಲದಲ್ಲಿ ಇದೆ. ರೈತರು ಲಾಭದಾಯಕ ಬೆಳೆ ಬೆಳೆಯುತ್ತಾರೆ, ನಾವೇನು ಮಾಡಲು ಆಗುದಿಲ್ಲ. ಆದ್ರೆ ಸರ್ಕಾರದ ಪ್ರೋತ್ಸಾಹದಿಂದ ಹೊಸ ತೋಟ ಆಗುವ ಅವಶ್ಯಕತೆ ಇಲ್ಲತ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.