UDUPI ; ಕಾಲೇಜಿಗೆ ಹೋದ ಯುವತಿ ಮನೆಗೆ ಬಾರದೇ ನಾಪತ್ತೆ
Saturday, January 14, 2023
ಕಾಲೇಜಿನಿಂದ ಅನುಮತಿ ಪಡೆದು ಹೊರ ಹೋದ ಯುವತಿ ವಾಪಾಸು ಮನೆಗೆ ಬಾರದೇ ನಾಪತ್ತೆ ಆದ ಘಟನೆ ಉಡುಪಿಯ ಪಡುಬೆಳ್ಳೆಯಲ್ಲಿ ನಡೆದಿದೆ. ಪಡುಬೆಳ್ಳೆ ನಿವಾಸಿ ಸ್ಟೀಫನ್ ಅಮ್ಮನ್ ಅವರ ಪುತ್ರಿ ರಿಯೋನಾ ಸ್ಟೆಫ್ನಿ ಅಮ್ಮನ್ನ (20 ನಾಪತ್ತೆ ಆದ ಯುವತಿ.
ಜನವರಿ 13ರಂದು ರಿಯೋನಾ ಸ್ಟೆಫ್ನಿ ಅಮ್ಮನ್ನ ಮಧ್ಯಾಹ್ನ ಕಾಲೇಜಿನಲ್ಲಿ ಅನುಮತಿ ಪಡೆದು ಹೊರ ಹೋಗಿದ್ದು ಮತ್ತೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಆಕೆಯ ತಾಯಿ ರೀಟಾ ಅಮ್ಮನ್ನ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ರಿಯೋನಾ ಸ್ಟೆಫ್ನಿ ಅಮ್ಮನ್ನ ಅವರು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು ನೀಲಿ ಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈಕೆ ಕನ್ನಡ, ಇಂಗ್ಲೀಷ್, ತುಳು ಭಾಷೆ ಮಾತನಾಡುತ್ತಿದ್ದು ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಉಡುಪಿ ನಗರ ಠಾಣೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.