
UDUPI : ಟೈಮಿಂಗ್ ವಿಚಾರದಲ್ಲಿ ಹೊಡೆದಾಡಿಕೊಂಡ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ನಿರ್ವಾಹಕರ..!
ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ನಡುವೆ ಪದೇ ಪದೇ ಜಗಳ ಆಗೋದು, ಕರಾವಳಿಯಲ್ಲಿ ಕಾಮನ್. ಆದ್ರೆ ಇದೇ ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ ನಡುವೆ ನಿರ್ವಾಹಕ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ
ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ಟೈಮಿಂಗ್ ವಿಚಾರದಲ್ಲಿ ಮೊದಲು ಜಗಳವಾಡಿದ್ದು, ನಂತರ ಜಗಳ ತಾರಕಕ್ಕೆ ಏರಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಬಸ್ ಚಾಲಕ ಖಾಸಗಿ ಬಸ್ ನಿರ್ವಾಹಕನಿಗೆ ಚಪ್ಪಲಿ ಏಟು ನೀಡಿದ ಘಟನೆಯೂ ನಡೆಯಿತು. ಸದ್ಯ ಇಬ್ಬರೂ ಬಡಿದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.