
MANGALORE- ನಾಪತ್ತೆಯಾದ 20 ವರ್ಷದ ಯುವತಿ ವಿವಾಹವಾಗಿ ಪತ್ತೆ
ಮಂಗಳೂರು: ಕಳೆದ ಜು. 16ರಂದು ಕೆಲಸಕ್ಕೆ ತೆರಳಿದವಳು ಮನೆಗೆ ಹಿ೦ದಿರುಗದೆ ನಾಪತ್ತೆಯಾಗಿದ್ದ 20 ವರ್ಷದ
ಯುವತಿ ಮದುವೆಯಾಗಿ ಪತ್ತೆಯಾಗಿದ್ದಾಳೆ.
ಸುರತ್ಕಲ್
3ನೇ ಬ್ಲಾಕ್ ನಿವಾಸಿ, ಮಣಪುರಂ ಫೈನಾನ್ಸ್ ಉದ್ಯೋಗಸ್ಥೆಯಾಗಿದ್ದ ಶಿವಾನಿ (20) ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಮಾಹಿತಿ ಆಧಾರದಲ್ಲಿ ಈಕೆಯನ್ನು ಪತ್ತೆ ಮಾಡಿ ಕರೆ
ತಂದರು.
ಜ. 24ರಂದು ನಗರದ ಕಂಕನಾಡಿ ಠಾಣೆಯ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿ ತಾನು ಪ್ರೀತಿಸಿದವನನ್ನು ಸ್ವಇಚ್ಛೆಯಿಂದ ಮದುವೆಯಾಗಿರುವುದಾಗಿ ಈಕೆ ಹೇಳಿಕೆ
ನೀಡಿದ್ದು, ಪತಿಯೊಂದಿಗೆ ಬಾಳುವುದಾಗಿ ಲಿಖಿತ ಹೇಳಿಕೆ ನೀಡಿದ್ದಾಳೆ.
ಗೋವಾ,
ಮುಂಬಯಿಗೆ ತೆರಳಿದ್ದ ಜೋಡಿ ಹಣದ ಸಮಸ್ಯೆ ಎದುರಾದಾಗ ಎರಡು ಮೊಬೈಲ್ ಮಾರಿ ಅದರ ಹಣದಿಂದ ಸ್ವಲ್ಪ ಸಮಯವನ್ನು ಕಳೆದಿದ್ದರು. ಸ್ನೇಹಿತರ ಜತೆ ಸಂಪರ್ಕ ಹೊಂದಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಯುಪಿಐ ಹಣವನ್ನು ಹಾಕಿದ ವಿಳಾಸ ಪತ್ತೆ ಮಾಡಿ ಜೋಡಿಯ ಸಂಪರ್ಕವನ್ನು ಸಾಧಿಸಿದ್ದರು.
ಇದನ್ನು ಓದಿ: ಮಂಗಳೂರಿನಲ್ಲಿ 20 ವರ್ಷದ ಯುವತಿ ನಾಪತ್ತೆ