UDUPI ; ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರರ ಬಲೆಗೆ ಬಿದ್ದ ರಾಶಿ ರಾಶಿ ಭೂತಾಯಿ
Saturday, January 14, 2023
ಉಡುಪಿಯ ಮಲ್ಪೆಯಲ್ಲಿ, ಆಳ ಸಮುದ್ರ ಮೀನುಗಾರರ ಬಲೆಗೆ ರಾಶಿ ರಾಶಿ ಭೂತಾಯಿ ಮೀನು ಸಿಕ್ಕಿದೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಬಂಪರ್ ಹೊಡೆದಿದ್ದು, ಬರೋಬರಿ ನಾಲ್ಕು ಟನ್ ಗೂ ಅಧಿಕ ಸಂಖ್ಯೆಯ ಭೂತಾಯಿ ಮೀನು ಬಲೆಗೆ ಬಿದ್ದಿದೆ.
ಭರ್ಜರಿ ಮತ್ಸ್ಯ ಭೇಟಿಯಿಂದ ಮೀನುಗಾರರು ಸಂತಸಗೊಂಡಿದ್ದಾರೆ. ಬಲೆಗೆ ಬಿದ್ದಿರುವ ರಾಶಿ ರಾಶಿ ಭೂತಾಯಿ ಮೀನುಗಳನ್ನು ಬೋಟ್ ಗೆ ಎಳೆದುಕೊಳ್ಳುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.